ಮಹಿಳೆಗೆ ಕಿರುಕುಳ ಆರೋಪ: ಕಾನ್ಸ್ಟೇಬಲ್ ವಿರುದ್ಧ ಎಫ್ ಐಆರ್ ದಾಖಲು

Date:

ಮಹಿಳೆಗೆ ಕಿರುಕುಳ ಆರೋಪ: ಕಾನ್ಸ್ಟೇಬಲ್ ವಿರುದ್ಧ ಎಫ್ ಐಆರ್ ದಾಖಲು

ಬೆಂಗಳೂರು: ಮಹಿಳೆಗೆ ಕಿರುಕುಳ ಆರೋಪ ಸಂಬಂಧ ಕಾನ್ಸ್ ಟೇಬಲ್ ವಿರುದ್ದ ಎಫ್ ಐಆರ್ ದಾಖಲು ಮಾಡಲಾಗಿದೆ. ಇಂದಿರಾನಗರ ಕಾನ್ಸ್ ಟೇಬಲ್‌ ಮನೋಜ್ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ರೇಖಾ ಎಂಬ ಮಹಿಳೆ ನಿಂಗರಾಜ್ ಎಂಬುವರ ಜೊತೆ ವಿವಾಹವಾಗಿದ್ದು,ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಮಹಿಳೆಯ ಗಂಡ ಅಪಘಾತದಲ್ಲಿ ಮೃತ ಪಟ್ಟ ಬಳಿಕ ದೂರಿನ ವಿಚಾರವಾಗಿ ಪೊಲೀಸ್ ಠಾಣೆಗೆ ಹೋಗಿದ್ದರು. ಇದೇ ವೇಳೆ ಪೊಲೀಸ್ ಠಾಣೆಯಲ್ಲಿ ಮನೋಜ್ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಬಳಿಕ ಪ್ರೀತಿಸಿ ಕಾನ್ಸ್ ಟೇಬಲ್‌ ಮನೋಜ್ ಮಹಿಳೆಯನ್ನು ಮದುವೆಯಾಗಿದ್ದರು. ರೇಖಾ, ಮನೋಜ್ ವಸಂತನಗರದ ಪೊಲೀಸ್ ಕ್ವಾಟ್ರಸ್ ನಲ್ಲಿ ವಾಸವಾಗಿದ್ದರು. ಇದೀಗ ಮಹಿಳೆಗೆ ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ನಡೆಸಿರೋ ಆರೋಪ ಕೇಳಿಬಂದಿದೆ. ಹೈಗೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದ್ದು, ಸದ್ಯ ಪೊಲೀಸರು ಕಾನ್ಸ್ ಟೇಬಲ್ ಮನೋಜ್ ಗೆ ನೋಟಿಸ್ ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ಶಿಕಾರಿಪುರ ಸೇರಿ ನಾಲ್ಕೈದು ಕಡೆ ಪಾದಯಾತ್ರೆಯಲ್ಲಿ ನಾನೇ ಭಾಗವಹಿಸುವೆ: ಡಿ.ಕೆ. ಶಿವಕುಮಾರ್

ಶಿಕಾರಿಪುರ ಸೇರಿ ನಾಲ್ಕೈದು ಕಡೆ ಪಾದಯಾತ್ರೆಯಲ್ಲಿ ನಾನೇ ಭಾಗವಹಿಸುವೆ: ಡಿ.ಕೆ. ಶಿವಕುಮಾರ್ ಬೆಂಗಳೂರು:...

ಕಾಡಾನೆ ದಾಳಿ: ಸಕಲೇಶಪುರದಲ್ಲಿ ಮಹಿಳೆ ಸಾವು, ಸಚಿವ ಈಶ್ವರ ಖಂಡ್ರೆ ತೀವ್ರ ಶೋಕ

ಕಾಡಾನೆ ದಾಳಿ: ಸಕಲೇಶಪುರದಲ್ಲಿ ಮಹಿಳೆ ಸಾವು, ಸಚಿವ ಈಶ್ವರ ಖಂಡ್ರೆ ತೀವ್ರ...

ಮೊದಲ ಪತ್ನಿಗೆ ವಂಚನೆ: ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಬಂಧನ

ಮೊದಲ ಪತ್ನಿಗೆ ವಂಚನೆ: ಪ್ರೇಯಸಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಟೆಕ್ಕಿ ಬಂಧನ ಬೆಂಗಳೂರು:...

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ

ಜೂನ್ 30ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ: ಸುಪ್ರೀಂಕೋರ್ಟ್ ನಿರ್ದೇಶನ ಬೆಂಗಳೂರು: ಗ್ರೇಟರ್...