ತಡರಾತ್ರಿ ಬೆಂಗಳೂರಲ್ಲಿ ಸರಣಿ ಕಳ್ಳತನ: ಲಕ್ಷಾಂತರ ರೂ ನಗದು ಕಳ್ಳತನ
ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದೀಗ ತಡರಾತ್ರಿ ಸರಣಿ ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನ ಚೋಳೂರುಪಾಳ್ಯ ಮುಖ್ಯ ರಸ್ತೆಯಲ್ಲಿ ನಡಿದಿದೆ. ಒಂದು ಮೆಡಿಕಲ್ , ಒಂದು ಬೇಕರಿ, ಹಾಗು ನಂದಿನಿ ಪಾರ್ಲರ್ ನಲ್ಲಿ ಕಳ್ಳತನ ಮಾಡಿದ್ದು, ವಿಶ್ವ ಮೆಡಿಕಲ್ ಗಲ್ಲದಲ್ಲಿದ್ದ ಲಕ್ಷಾಂತರ ರೂ ನಗದು ಕಳ್ಳತನ ಮಾಡಿ ಖದೀಮರು ಪರಾರಿಯಾಗಿದ್ದಾರೆ.. ಇನ್ನು ಘಟನೆ ಸಂಬಂಧ ಸ್ಥಳಕ್ಕೆ ಕೆಪಿ ಅಗ್ರಹಾರ ಪೊಲೀಸ್ರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.