ಬರಗಾಲದಲ್ಲಿ ರಾಜ್ಯದ ಜನರಿಗೆ ಅಪಾಯವಾದರೆ ಕಾಂಗ್ರೆಸ್ ಸರ್ಕಾರವೇ ಹೊಣೆ: ಆರ್.ಅಶೋಕ್
ಬೆಂಗಳೂರು: ಬರಗಾಲದಲ್ಲಿ ರಾಜ್ಯದ ಜನರಿಗೆ ಅಪಾಯವಾದರೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬರದ ಛಾಯೆ ಶುರುವಾಗಿದೆ. ಬರಗಾಲ ಇದೆ ಅಂತಾ ಪ್ರಿಯಾಂಕ್ ಖರ್ಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಭೆ ಮಾಡ್ತಾರೆ. ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಡಿಕೆಶಿ ನೀರು ಬಿಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನೀರು ಬಿಟ್ಟ ವಿಚಾರವನ್ನು ಎಂ.ಬಿ ಪಾಟೀಲ್ ಅವರ ಬಳಿ ಕೇಳಿದ್ರೆ ನನಗೆ ಮಾಹಿತಿಯೇ ಇಲ್ಲ ಎನ್ನುತ್ತಾರೆ. ಹೆಚ್ಚು ನೀರಿದ್ದು, ಅದನ್ನು ಬಿಟ್ಟರೆ ಏನು ತಪ್ಪು ಎಂದು ಡಿಕೆಶಿ ಹೇಳ್ತಾರೆ. ನೀರಿನ ವಿಚಾರವಾಗಿ ಅವರ ಸ್ನೇಹಿತರಾದ ತಮಿಳುನಾಡಿನವರನ್ನು ಡಿಕೆಶಿ ಕೇಳಲಿ. ಬರಗಾಲದಲ್ಲಿ ರಾಜ್ಯದ ಜನರಿಗೆ ಅಪಾಯವಾದರೆ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದ್ದಾರೆ.