ಭಾರತದ ಪ್ರಖ್ಯಾತ ಬ್ಯಾಂಕ್‍ಗಳಲ್ಲಿ ಒಂದಾದ ಎಸ್‍ಬಿಐ ಬ್ಯಾಂಕ್‍ನಲ್ಲಿ ಭದ್ರತೆಯ ಕೊರತೆಯ ಹಿನ್ನಲೆಯಲ್ಲಿ ಸುಮಾರು 6 ಲಕ್ಷ ಡೆಬಿಟ್ ಕಾರ್ಡ್‍ಗಳನ್ನು ಸ್ಥಗಿತಗೊಳಿಸಲು ಮುಂದಾಗಿದ್ದು, ಆದಷ್ಟು ಬೇಗ ಗ್ರಾಹಕರಿಗೆ ಪರ್ಯಾಯ ಮಾರ್ಗ ಕಂಡುಕೊಳ್ಳುತ್ತೇವೆ ಎಂದು ತಿಳಿಸಿದೆ. ಮಾಲ್‍ವೇಲ್‍ಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ ಸುಮಾರು 6 ಲಕ್ಷ ಗ್ರಾಹಕರ ಡೆಬಿಟ್ ಕಾರ್ಡ್ ಸ್ಥಗಿತಗೊಳಿಸಿ ಆದಷ್ಟು ಬೇಗ ಹೊಸ ಡೆಬಿಟ್ ಕಾರ್ಡ್ ನೀಡುವುದಾಗಿ ಹೇಳಿದೆ. ಭದ್ರತಾ ಲೋಪದೋಷಗಳಿಂದ ಗ್ರಾಹಕರ ಡೆಬಿಟ್ ಕಾರ್ಡ್ ಸಂಖ್ಯೆ ಸೋರಿಕೆಯಾಗಿರುವ ಕಾರಣದಿಂದ ಮುಂಜಾಗ್ರತಾ ಕ್ರಮ ಅನುಸರಿಸಲಾಗ್ತಾ ಇದೆ ಎಂದು ಹೇಳಿದ್ದಾರೆ. ಇನ್ನು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಷ್ಟು ಪ್ರಮಾಣದ ಡೆಬಿಟ್ ಕಾಡ್ ಬ್ಲಾಕ್ ಮಾಡ್ತಾ ಇರೋದು ಇದೇ ಮೊದಲ ಬಾರಿಯಾಗಿದೆ. ಎಸ್‍ಬಿಐ ಎಟಿಎಂ ಕೇಂದ್ರಗಳಲ್ಲಿ ಯಾವುದೇ ದೋಷಗಳಿಲ್ಲ. ಆದರೆ ಗ್ರಾಹಕರು ಬೇರೆ ಬೇರೆ ಕೇಂದ್ರಗಳಲ್ಲಿ ಎಸ್‍ಬಿಎಂ ಡೆಬಿಟ್ ಕಾರ್ಡ್ ಬಳಕೆ ಮಾಡಿರೋದ್ರಿಂದ ಅವರ ಕಾರ್ಡ್ ಸಂಖ್ಯೆ ಸೋರಿಕೆಯಾಗಿಬಹುದು. ಹೀಗಾಗಿ ನಾವು ಈ ಕ್ರಮ ಕೈಗೊಳ್ಳಲಾಗ್ತಾ ಇದೆ ಎಂದಿದ್ದಾರೆ. ಕಾರ್ಡ್ ಬ್ಲಾಕ್ ಆಗಿದ್ದರೆ ಭಯ ಪಡುವ ಅಗತ್ಯವೇ ಇಲ್ಲ ಕೂಡಲೇ ಗ್ರಾಹಕರು ಹತ್ತಿರದ ಎಸ್‍ಬಿಎಂ ಬ್ಯಾಂಕ್‍ಗೆ ತೆರಳಿ ಹೊಸ ಕಾರ್ಡ್ ಪಡೆಯಬಹುದು. ಇಲ್ಲವೇ ಆನ್‍ಲೈನ್ ಮೂಲಕವೂ ಹೊಸ ಕಾರ್ಡ್‍ಗೆ ಮನವಿ ಸಲ್ಲಿಸಬಹುದು. ಈ ಕುರಿತಾಗಿ ಎಲ್ಲಾ ರಾಜ್ಯಗಳ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಎಸ್‍ಬಿಐ ಸ್ಪಷ್ಟ ಪಡಿಸಿದೆ.
Like us on Facebook The New India Times
POPULAR STORIES :
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!