No menu items!
12.3 C
Munich
Thursday, April 30, 2026

ಏರ್‍ಟೆಲ್ ಗ್ರಾಹರಿಗೆ ಬಂಪರ್ ಕೊಡುಗೆ: ಕೇವಲ 259ಕ್ಕೆ 10ಜಿಬಿ 4ಜಿ ಡೆಟಾ..!

Must read

ಭಾರತದಲ್ಲಿ ಟೆಲಿಕಾಂ ಸಂಸ್ಥೆಗಳ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಹೋಗ್ತಿದೆ.. ಉಭಯ ಕಂಪನಿಗಳ ಕಿತ್ತಾಟಕ್ಕೆ ಲಾಭ ಪಡಿತಿರೋದು ಮಾತ್ರ ಗ್ರಾಹಕರು. ರಿಲಾಯಾನ್ಸ್ ಜಿಯೋ 4ಜಿ ಬಂದ ಮೇಲಂತೂ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಆಫರ್ ಮೇಲೆ ಆಫರ್ ಕೊಡ್ತಾ ಹೋಗ್ತಿದೆ. ಅದ್ರಲ್ಲೂ ಏರ್‍ಟೆಲ್ ಸಂಸ್ಥೆಯಂತೂ ಜಿಯೋಗೆ ಬೆಳೆಯೋಕೆ ಬಿಡ್ಬಾರ್ದಪ್ಪ ಅಂತ ತಮ್ಮ ಗ್ರಾಹಕರಿಗೆ ಪ್ರತಿ ನಿತ್ಯ ಸಖತ್ ಆಫರ್ ಕೊಡ್ತಾ ಇದೆ. ಇದೊಂದೆ ಕಂಪನಿ ಅಲ್ಲ ವೊಡಾಫೋನ್, ಐಡಿಯಾ ಬಿಎಸ್‍ಎನ್‍ಎಲ್ ಕೂಡ ಇಂದೆಂದೂ ನೀಡಿದ ರಿಯಾಯಿತಿ, ಫ್ರೀ ಆಫರ್‍ನ ಜಿಯೋ ಬಂದ ಮೇಲೆ ಕೊಡ್ತಾ ಇದೆ. ಈ ಹಿಂದೆ ವೊಡಾಫೋನ್ ಸಂಸ್ಥೆ ಗ್ರಾಹಕರಿಗೆ 1ಜಿಬಿ ರಿಚಾರ್ಜ್ ಮಾಡಿಸಿಕೊಂಡ್ರೆ 10 ಜಿಬಿ 4ಜಿ ಡೆಟಾ ಆಫರ್ ನೀಡಿತ್ತು. ಇದರಿಂದ ತಮ್ಮ ಸಂಸ್ಥೆಗ ಪೆಟ್ಟು ಬೀಳತ್ತೆ ಎಂದರಿತ ಏರ್ಟೆಲ್ ತಕ್ಷಣವೇ 1495ರೂ.ಗೆ ಅನ್‍ಲಿಮಿಟೆಡ್ 4ಜಿ ಡೆಟಾದ ಬಂಪರ್ ಕೊಡುಗೆಯೂ ನೀಡ್ತು.. ಆದರೆ ಈಗ ಏರ್ಟೆಲ್ಲ್ ಇವೆಲ್ಲಾವನ್ನೂ ಮೀರಿ ಸ್ವಲ್ಪ ಮುಂದೆ ಹೋಗಿ ನಿಂತಿದೆ ನೋಡಿ.. ಭಾರತದ ನಂ.1 ಟೆಲಿಕಾಂ ಸಂಸ್ಥೆಯಾದ ಭಾರತೀ ಏರ್‍ಟೆಲ್ ತಮ್ಮ ಗ್ರಾಹಕರಿಗೆ ದೀಪಾವಳಿ ಬಂಪರ್ ಆಫರ್ ನೀಡಿದೆ..! ಅದೇನಂತೀರಾ..? ನಿಮ್ಮಲ್ಲಿ ಯಾವುದೇ ಕಂಪನಿಯ 4ಜಿ ಸೆಟ್ ಇದ್ರೆ ಈ ತಕ್ಷಣವೇ ಏರ್‍ಟೆಲ್ ಶಾಖೆಗೆ ಹೋಗಿ 259ರೂ. ರೀಚಾರ್ಜ್ ಮಾಡಿಕೊಳ್ಳಿ ಯಾಕಂದ್ರೆ ಕೇಲವ 259ರೂ.ಗೆ 10ಜಿಬಿ 4ಜಿ ಡೆಟಾ ಆಫರ್ ನೀಡಿದ್ದು ಯಾವುದೇ 4ಜಿ ಮೊಬೈಲ್ ಆದ್ರೂ ಈ ಆಫಸ್ ಸಿಗತ್ತೆ ನೋಡಿ..! ಈ ಹಿಂದೆ ಇಂತಹ ಬಂಪರ್ ಕೊಡುಗೆಯನ್ನು ಕೇವಲ ಸ್ಯಾಮ್‍ಸಂಗ್ ಗ್ಯಾಲಕ್ಸಿ ಜೆ ಸಿರೀಸ್ ಫೋನ್‍ಗಳಿಗೆ ಮಾತ್ರ ನೀಡಿದ್ದ ಏರ್‍ಟೆಲ್ ಈಗ ಎಲ್ಲಾ ಕಂಪನಿಯ 4ಜಿ ಸೆಟ್‍ಗಳಿಗೂ ನೀಡಿದೆ.
ಇನ್ನು ಹೊಸದಾಗಿ ಸ್ಮಾರ್ಟ್‍ಫೋನ್ ಖರೀದಿ ಮಾಡುವ ಏರ್‍ಟೆಲ್ ಗ್ರಾಹಕರು ಕೇವಲ 259ರೂ.ಗೆ 10ಜಿಬಿ ಪಡೆಯಬಹುದಾಗಿದೆ. ಪ್ರಾರಂಭದಲ್ಲಿ 1 ಜಿಬಿ ಡೆಟಾ ತಕ್ಷಣ ಖಾತೆಗೆ ಕ್ರೆಡಿಟ್ ಆಗುತ್ತದೆ. ಇನ್ನುಳಿದ 9ಜಿಬಿ 4ಜಿ ಡೆಟಾ ಮೈ ಏರ್‍ಟೆಲ್ ಆಪ್ ಮೂಲಕ ಕ್ರೆಡಿಟ್ ಆಗಲಿದೆ. ಈ ಆಫರ್ ಇನ್ನು ಮುಂದಿನ 90 ದಿನ ಕಾಲ ಗ್ರಾಹಕರಿಗೆ ಲಭ್ಯವಾಗಲಿದೆ.

Like us on Facebook  The New India Times

POPULAR  STORIES :

ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video

ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ

ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?

ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article