ಯಶ್ ಜೊತೆಗೆ ಹುಟ್ಟುಹಬ್ಬ ಆಚರಣೆ: ಹೇಗಿತ್ತು ರಾಧಿಕಾ ಪಂಡಿತ್ ಸೆಲಬ್ರೇಶನ್!
ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ಎಂದೇ ಖ್ಯಾತಿ ಪಡೆದಿರುವ ರಾಧಿಕಾ ಪಂಡಿತ್ 41ನೇ ವಸಂತಕ್ಕೆ ಕಾಲಿಟ್ಟಿರುವ ಸಂದರ್ಭ ಫ್ಯಾನ್ಸ್ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.
ಈ ಬ್ಯೂಟಿಫುಲ್ ಹೀರೋಯಿನ್ಗೆ 41 ವರ್ಷ ಕಳೆದರು ಇನ್ನು 18ರ ಚೆಲುವೆ ಎಂಬಂತೆ ಕಾಣುತ್ತಿರುವುದು ಫ್ಯಾನ್ಸ್ಗೆ ಅಚ್ಚರಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಎಷ್ಟೋ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.
ಅಲ್ಲದೇ ರಾಧಿಕಾ ಪಂಡಿತ್ ನಿವಾಸದ ಬಳಿ ಆಗಮಿಸಿದ್ದ ಫ್ಯಾನ್ಸ್ ಕೇಕ್ ತಂದು ನಟಿಯ ಕೈಯಿಂದಲೇ ಕಟ್ ಮಾಡಿಸಿ, ಬಳಿಕ ವಿಶ್ ಮಾಡಿದ್ದಾರೆ. ಜೊತೆಗೆ ಸೆಲ್ಫಿ ಫೋಟೋ ಕೂಡ ಕ್ಲಿಕ್ ಮಾಡಿಕೊಂಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ರಾಧಿಕಾ ಪಂಡಿತ್ ಸಿನಿ ರಂಗದಲ್ಲಿ ಆಕ್ಟಿವ್ ಆಗಿರುವಷ್ಟು ದಿನ ಹೀರೋಯಿನ್ ಆಗಿ ಮೆರೆದಿದ್ದಾರೆ. ಜನ್ಮದಿನದ ಅಂಗವಾಗಿ ಅವರ ಕುಟುಂಬಸ್ಥರು, ಆತ್ಮೀಯರು ಭಾಗಿಯಾಗಿ ವಿಶ್ ಮಾಡಿದ್ದಾರೆ.
ಪತಿ ಯಶ್ ಜೊತೆ ರಾಧಿಕಾ ಪಂಡಿತ್ ಅದ್ಧೂರಿಯಾಗಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಬೆಳಗ್ಗೆ ನೂರಾರು ಅಭಿಮಾನಿಗಳನ್ನು ಭೇಟಿಯಾಗಿದ್ದರು. ಈ ವೇಳೆ ಅವರು ಕೊಟ್ಟ ಗಿಫ್ಟ್ ಅನ್ನು ಸ್ವೀಕರಿಸಿದರು. ಸಂಜೆ ವೇಳೆಗೆ ಆಪ್ತರು, ಕುಟುಂಬಸ್ಥರ ಜೊತೆ ಹುಟ್ಟುಹಬ್ಬ ಸೆಲೆಬ್ರೆಷನ್ ಮಾಡಿದರು. ಬರ್ತ್ಡೇ ಸಂಭ್ರಮದ ವೀಡಿಯೋ ವೈರಲ್ ಆಗಿದೆ.