ಅನಾರೋಗ್ಯ: ಕಲಾಪೋಷಕ ವೆಂಕಟಗಿರುಯಪ್ಪ ಶ್ರೀನಿವಾಸ್ ವಿಧಿವಶ!
ಗದಗ:- ಅನಾರೋಗ್ಯದಿಂದ ಬಳಲುತ್ತಿದ್ದ ಕಲಾಪೋಷಕ ಕಾಳಮಂಜಿ ವೆಂಕಟಗಿರುಯಪ್ಪ ಶ್ರೀನಿವಾಸ್ ಅವರು ಗದಗ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಕಾವೆಂಶ್ರೀ ನಿಧನರಾಗಿದ್ದಾರೆ. 2023 ರಲ್ಲಿ ನಡೆದಿದ್ದ 96 ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಕಾವೆಂಶ್ರೀ ಅವರ ಕಾರ್ಯವನ್ನು ಪ್ರಶಂಸಿದ್ದರು.
ಕಾವೆಂಶ್ರೀ ಅವರ 25 ವರ್ಷಗಳ ಕಲಾ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದರು. ಕಲೆ, ಸಂಸ್ಕೃತಿ ಉಳಿವಿಗಾಗಿ ಕಾವೆಂಶ್ರೀ ಅವರು 1996 ರಲ್ಲಿ ಕಲಾ ಚೇತನ ಸಂಸ್ಥೆ ಸ್ಥಾಪಿಸಿದರು. ಕಲಾ ಚೇತನ ಸಂಸ್ಥೆಯ ಮೂಲಕ ಅಂತರಾಷ್ಟ್ರೀಯ ಕಲಾವಿದರ ಕಾರ್ಯಕ್ರಮ ಆಯೋಜಿಸುತ್ತಿದ್ದರು. ನಿರಂತರ ಕಾರ್ಯಕ್ರಮ ಆಯೋಜನೆ ಬಗ್ಗೆ ಪ್ರಧಾನಿ ಮೋದಿಯವರು ಸಂತಸ ವ್ಯಕ್ತಪಡಿಸಿದ್ದರು.