ಗ್ಯಾರಂಟಿ ಯೋಜನೆಗಳು ಆರಂಭವಾಗಿರುವುದು ಕರ್ನಾಟಕದಿಂದ, ನಾವೇ ಇದಕ್ಕೆ ಮಾದರಿ: ಡಿ.ಕೆ. ಶಿವಕುಮಾರ್
ಬೆಂಗಳೂರು: ಗ್ಯಾರಂಟಿ ಯೋಜನೆಗಳು ಆರಂಭವಾಗಿರುವುದು ಕರ್ನಾಟಕದಿಂದ, ನಾವೇ ಇದಕ್ಕೆ ಮಾದರಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದ ಆವರಣದಲ್ಲಿ ಮಾತನಾಡಿದ ಅವರು, ನಾವು ಅವರ ಹಕ್ಕು ಕಸಿದಿಲ್ಲ. ಶಾಸಕರ ಹಕ್ಕು ಹಾಗೇ ಇದೆ. ನಾವು ಬಡವರಿಗಾಗಿ ಹೊಸದಾಗಿ ಐದು ಗ್ಯಾಂಟಿ ಯೋಜನೆಗಳನ್ನು ನೀಡಿದ್ದು,
ಈ ಯೋಜನಗಳು ಸರಿಯಾಗಿ ತಲುಪುತ್ತಿದೇಯೇ ಇಲ್ಲವೇ? ಇದರ ಸದುಪಯೋಗವಾಗುತ್ತಿದೆಯೇ ಅಥವಾ ದುರುಪಯೋಗವಾಗುತ್ತಿದೆಯೇ ಎಂದು ಮನೆ ಮನೆಗೆ ಹೋಗಿ ಪರಿಶೀಲನೆ ಮಾಡಲು ನಮ್ಮ ಜನರಿಗೆ ಜವಾಬ್ದಾರಿ ನೀಡಿದ್ದೇವೆ. ಜನರಿಗೆ ಯೋಜನೆ ಪಡೆಯಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಾವು ಇದನ್ನು ಮಾಡಿದ್ದೇವೆ.
ಮಾನ್ಯ ಪ್ರಧಾನಮಂತ್ರಿಗಳು ಸೇರಿದಂತೆ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡಿದ್ದರು. ಈಗ ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ ಸೇರಿದಂತೆ ಅವರ ರಾಜ್ಯಗಳಲ್ಲಿ ಗ್ಯಾರಂಟಿ ಜಾರಿ ಮಾಡುತ್ತಿದ್ದಾರೆ. ಮೋದಿ ಅವರು ಲೋಕಸಭೆ ಚುನಾವಣೆಯಲ್ಲಿ ಮೋದಿ ಕಿ ಗ್ಯಾರಂಟಿ ಎಂದರು. ಗ್ಯಾರಂಟಿ ಯೋಜನೆಗಳು ಆರಂಭವಾಗಿರುವುದು ಕರ್ನಾಟಕದಿಂದ, ನಾವೇ ಇದಕ್ಕೆ ಮಾದರಿ ಎಂದರು.