ನನ್ನ ಪೋಸ್ಟ್ಗಳಿಗೂ- ದರ್ಶನ್ಗೂ ಯಾವುದೇ ಸಂಬಂಧವಿಲ್ಲ: ಸುಮಲತಾ ಸ್ಪಷ್ಟನೆ
ನಟ ದರ್ಶನ್ ಹಾಗೂ ಸುಮಲತಾ ಸಂಬಂಧ ಹಳಸಿದೆ ಎಂಬ ಮಾತು ಜೋರಾಗಿದೆ. ಇನ್ಸ್ಟಾಗ್ರಾಮ್ನಲ್ಲಿ ದರ್ಶನ್ ಅವರು ಸುಮಲತಾ ಸೇರಿದಂತೆ ಎಲ್ಲರನ್ನೂ ಅನ್ಫಾಲೋ ಮಾಡಿದ್ದಾರೆ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿದೆ. ಇದೇ ಸಮಯದಲ್ಲಿ ಸುಮಲತಾ ಹಾಕಿರೋ ಮಾರ್ಮಿಕ ಪೋಸ್ಟ್ ಕೂಡ ಗಮನ ಸೆಳೆದಿದೆ.
ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಮಾಜಿ ಸಂಸದೆ ಸುಮಲತಾ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ನನ್ನ ಪೋಸ್ಟ್ಗಳಿಗೂ- ದರ್ಶನ್ಗೂ ಯಾವುದೇ ಸಂಬಂಧವಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡೋದು ಅವರ ವೈಯಕ್ತಿಕ ವಿಚಾರ. ತಾಯಿ- ಮಗನ ಸಂಬಂಧ ನಮ್ಮದು. ಇದರಲ್ಲಿ ಅನಗತ್ಯ ವಿವಾದ ಬೇಡ ಅಂತಾ ಸುಮಲತಾ ತಿಳಿಸಿದ್ದಾರೆ.
ನನ್ನ ಹಿಂದಿನ ಒಂದು ಪೋಸ್ಟ್ ಕುರಿತು ಅನಗತ್ಯವಾದ ವಿವಾದ ಸೃಷ್ಟಿ ಆಗಿರುವುದರಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ. ಇನ್ಸ್ಟಾ ಪೋಸ್ಟ್ಗಳು ಯಾರನ್ನೂ ಗುರಿಯಾಗಿಸಿ ಮಾಡಿರುವುದು ಅಲ್ಲ. ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ. ನನ್ನನ್ನು ಯಾರು ಫಾಲೋ ಮಾಡುತ್ತಾರೆ, ಯಾರು ಅನ್ಫಾಲೋ ಮಾಡುತ್ತಾರೆ ಎನ್ನುವ ಗಮನಿಸುವ ಅಭ್ಯಾಸ ಹೊಂದಿಲ್ಲ ಎಂದು ಹೇಳಿದ್ದಾರೆ.
ದರ್ಶನ್ ಅವರು ಇನ್ಸ್ಟಾ, ಟ್ವಿಟರ್ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ಅವರ ಮಗನನ್ನೂ ಕೂಡ. ಇದು ಅವರ ವೈಯಕ್ತಿಕ ಆಯ್ಕೆ. ತಾಯಿ ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದ ಸೃಷ್ಟಿಸುವುದು ಬೇಡ. ನನ್ನ ಪೋಸ್ಟ್ಗಳು ಯಾರನ್ನೂ ಉದ್ದೇಶಿಸಿಲ್ಲ. ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಎಳೆದು ತರುವ ಅಭ್ಯಾಸ ಯಾವತ್ತೂ ಹೊಂದಿಲ್ಲ ಎಂದು ಹೇಳಿದ್ದಾರೆ.