No menu items!
15.2 C
Munich
Sunday, May 24, 2026

ಮೊದಲು ಕಣ್ಣಿಗೆ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ..!

Must read

ಮೊದಲು ಕಣ್ಣಿಗೆ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ..!

ಹೆಣ್ಣಿನ ಕಣ್ಣಿನ ಅಂದ ವರ್ಣಿಸಲು ಪದಗಳು ಸಾಲದು, ಇದಕ್ಕೆ ಕಾಡಿಗೆಯಿಂದ ಅಲಂಕಾರ ಮಾಡಿದರೆ ಇನ್ನಷ್ಟು ಚೆಂದ. ಅಂದದ ಕಣ್ಣನ್ನು ಇನ್ನಷ್ಟು ಆಕರ್ಷಕಗೊಳಿಸುವ ಶಕ್ತಿ ಕಾಡಿಗೆಗಿದೆ. ಕೆಲವರಿಗೆ ಪ್ರತಿದಿನ ಕಣ್ಣಿಗೆ ಕಾಡಿಗೆ ಹಚ್ಚುವ ಅಭ್ಯಾಸವಿರುತ್ತದೆ. ಆದ್ದರಿಂದ ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುವ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇದು ದಿನ ಪೂರ್ತಿ ಕಾಡಿಗೆ ಉಳಿದುಕೊಳ್ಳಲು ಸಹಾಯ ಮಾಡುತ್ತದೆ.
ಕಾಡಿಗೆ ಹಚ್ಚುವ ಮೊದಲು ನಿಮ್ಮ ಕಣ್ಣಿನ ಪ್ರದೇಶವು ಸ್ವಚ್ಛವಾಗಿ ಎಣ್ಣೆ ಮುಕ್ತವಾಗಿರಬೇಕು. ಮುಖ ತೊಳೆದ ನಂತರ ಎಣ್ಣೆ-ಮುಕ್ತವಾಗಿರುವ ಟೋನರನ್ನು ಬಳಸುವುದು ಸೂಕ್ತ.
ಕಾಡಿಗೆಯನ್ನು ಕಣ್ಣಿನ ಒಳಭಾಗದಲ್ಲಿ ಹಚ್ಚದಿರಿ. ಇದು ಕಣ್ಣು ಉರಿ ಬರಲು ಕಾರಣವಾಗುತ್ತದೆ. ಆದ್ದರಿಂದ ಕಣ್ಣಿನ ರೆಪ್ಪೆಗೂದಲಿನ ಮಧ್ಯೆ ಹಚ್ಚಿ.
ಕಣ್ಣಿಗೆ ಕಾಡಿಗೆ ಹಚ್ಚಿದ ನಂತರ ಐಶ್ಯಾಡೋ ಬ್ರೆಶ್ ಅಥವಾ ಬೆರಳುಗಳಿಂದ ಕಣ್ಣಿನ ಅಂಚಿನಲ್ಲಿ ತೆಳುವಾಗಿ ಪೌಡರ್‌ ಹಚ್ಚಿ. ಇದು ನಿಮ್ಮ ಕಾಡಿಗೆ ದಿನ ಪೂರ್ತಿ ಉಳಿಯಲು ಸಹಾಯ ಮಾಡುತ್ತದೆ.

- Advertisement -spot_img

More articles

- Advertisement -spot_img

Latest article