ಅಪ್ಪು ಸಮಾಧಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಿದ ಅಶ್ವಿನಿ, ರಾಘಣ್ಣ
ಬೆಂಗಳೂರು: ಸಿನಿಮಾ ಮಾತ್ರವಲ್ಲದೇ ಸಾಮಾಜಿಕ ಸೇವೆಯಿಂದಲೂ ಇಡೀ ಭಾರತದಲ್ಲಿ ಹೆಸರು ಸಂಪಾದಿಸಿದ ನಟಸಾರ್ವಭೌಮ ಡಾ.ರಾಜ್ಕುಮಾರ್ ಅವರ ಕಿರಿಪುತ್ರ ಪುನೀತ್ ರಾಜ್ಕುಮಾರ್ ಅವರಿಗೆ ಇಂದು ಜನ್ಮದಿನ.ಅವರು ಬದುಕಿದ್ದರೆ ಕುಟುಂಬದ ಜೊತೆ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರು ಹೃದಯಾಘಾತದಿಂದ ಮೃತಪಟ್ಟರು.
ರಾಘಣ್ಣ ಕುಟುಂಬಸ್ಥರು ಹಾಗೂ ಪುತ್ರಿಯರೊಂದಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಗಮಿಸಿ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಅಪ್ಪನಿಗಾಗಿ ತಯಾರಿಸಿದ ಕೇಕ್ ಅನ್ನು ಅಪ್ಪು ಪುತ್ರಿಯರು ಸ್ಮಾರಕದ ಮುಂದೆ ಇರಿಸಿದ್ದಾರೆ.
ಈ ಮೂಲಕ ತಂದೆ ಹುಟ್ಟುಹಬ್ಬಕ್ಕೆ ಪುತ್ರಿಯರು ಶುಭಕೋರಿದ್ದಾರೆ. ಈ ವೇಳೆ, ಅಶ್ವಿನಿ ಜೊತೆಗಿನ ಸೆಲ್ಫಿಗಾಗಿ ಅನೇಕರು ಮುಗಿಬಿದ್ದಿದ್ದಾರೆ. ಇನ್ನೂ ಅಪ್ಪು ಹುಟ್ಟುಹಬ್ಬದ ಹಿನ್ನೆಲೆ ಸಮಾಧಿ ಬಳಿ ಅಪಾರ ಸಂಖೆಯಲ್ಲಿ ಜನ ಸೇರಿದ್ದಾರೆ. ಅಪ್ಪು ಇಷ್ಟಪಡುವ ನೆಚ್ಚಿನ ತಿಂಡಿಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ.