ಸ್ಯಾಂಡಲ್‍ವುಡ್‍ನ ಸ್ಟಾರ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಕಳೆದ ವರಮಹಾಲಕ್ಮಿ ಹಬ್ಬದಂದು ಗೋವಾದಲ್ಲಿ ಅದ್ಧೂರಿ ಎಂಗೇಜ್‍ಮೆಂಟ್ ಮಾಡಿಕೊಂಡ ಶುಭ ಸುದ್ದಿ ಎಲ್ರಿಗೂ ಗೊತ್ತು.. ಆದ್ರೆ ಈಗ ಈ ಜೋಡಿ ಅತೀ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.. ಅಂದ್ರೆ ಈ ಮಿಸ್ಟರ್ ಅಂಡ್ ಮಿಸ್ಸಸ್ ರಾಮಾಚಾರಿ ಇನ್ನೆರಡು ತಿಂಗಳಲ್ಲಿ ಮದ್ವೆ ಆಗ್ತಾ ಇದ್ದಾರಂತೆ..! ಈಗಾಗಲೇ ಯಶ್ ಹಾಗೂ ರಾಧಿಕಾ ಅವರ ಮದ್ವೆ ಡೇಟ್ ನಿಗದಿಯಾಗಿದ್ದು ಮುಂದಿನ ಡಿಸೆಂಬರ್ 10 ಮತ್ತು 11 ರಂದು ಈ ಇಬ್ಬರು ಜೋಡಿ ಹಸೆಮಣೆ ಏರಲಿದ್ದಾರೆ ಎಂದು ತಿಳಿದು ಬಂದಿದೆ. ನಿಶ್ಚಿತಾರ್ಥ ಸಮಾರಂಭದಲ್ಲಿ ನಿಗಧಿಯಾದಂತೆ ಇವರಿಬ್ಬರ ಮದುವೆ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಆದರೆ ಮದುವೆಯ ದಿನಾಂಕ ನಿಗದಿಯಾಗಿರುವ ಬಗ್ಗೆ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬಸ್ಥರು ಎಲ್ಲಿಯೂ ಹೇಳಿಕೊಂಡಿಲ್ಲ. ಇನ್ನು ಮದ್ವೆಗೂ ಮುನ್ನ ಯಶ್ ಹಾಗೂ ರಾಧಿಕಾ ಪಂಡಿತ್ ನಟಿಸಿರುವ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ಇದೆ ತಿಂಗಳ 28ರಂದು ತೆರೆ ಕಾಣಲು ಸಿದ್ಧವಾಗಿದೆ.
Like us on Facebook The New India Times
POPULAR STORIES :
ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!
ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!