ಒಬ್ಬ ನಟ, ಇಲ್ಲ ಒಬ್ಬ ಸೆಲೆಬ್ರೆಟಿ ಅಥವಾ ಒಬ್ಬ ಸ್ಟಾರ್ ಆಟಗಾರ ಎನಾದ್ರು ಒಂದು ಸಣ್ಣ ಸಾಧನೆ ಮಾಡಿದ್ರೆ ಸಾಕು ಆ ಸುದ್ದಿ ಸಖತ್ ವೈರಲ್ ಆಗ್ಬಿಡತ್ತೆ.. ಅದೇ ಒಬ್ಬ ಸಾಮಾನ್ಯ ವ್ಯಕ್ತಿ ಮೌಂಟ್‍ಎವರೆಸ್ಟ್ ನ ನೂರು ಬಾರಿ ಹತ್ತಿದ್ರೂ ಅದು ಸುದ್ದಿ ಅನ್ಸೊಲ್ಲ.. ಅದೇ ರೀತಿಯಾಗಿ ಬೆಂಗಳೂರಿನ ಒಬ್ಬ ಸಾಮಾನ್ಯ ನೀರಿನ ಟ್ಯಾಂಕ್ ಡ್ರೈವರ್ ಮಾಡಿದ ಸಾಧನೆ ಒಬ್ಬ ನಟ, ಸೆಲೆಬ್ರೆಟಿ ಮತ್ತು ಸ್ಟಾರ್ ಆಟಗಾರನ ಸಾಧನೆಗೂ ಮೀರಿದ್ದು.. ಕಡು ಬಡತನದಲ್ಲಿ ಬೆಳೆದು ಒಬ್ಬ ಸಾಮಾನ್ಯ ಡ್ರೈವರ್ ಆಗಿ ವಿಶ್ವ ಮಟ್ಟದ ಖ್ಯಾತಿಗಳಿಸಿದರೂ ಈಗ್ಲೂ ಎಲೆಮರೆ ಕಾಯಿಯಂತಿರೋದು ನಿಜಕ್ಕೂ ಶೋಚನೀಯ..! 25 ವರ್ಷ ವಯಸ್ಸಿನ ಜಿ. ಬಾಲಕೃಷ್ಣ ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್ ಆದ್ರೂ ಸಾಧನೆ ಮಾತ್ರ ಇವೆಲ್ಲಕ್ಕೂ ಮೀರಿದ್ದು.. ಈತ ಒಬ್ಬ ಬಾಡಿ ಬಿಲ್ಡರ್ ಆಗಿದ್ದು 2016ನೇ ಸಾಲಿನಲ್ಲಿ ದೇಹದಾಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ‘ಅರ್ನಾಲ್ಡ್ ಶ್ವಾರ್ಜಿನೆಗ್ನರ್ ಆಫ್ ವೈಟ್‍ಫೀಲ್ಡ್ ಅವಾರ್ಡ್’ ಹಾಗೂ ‘ಮಿಸ್ಟರ್ ಏಷ್ಯಾ’ ಗೆದ್ದು ದೇಶದ ಕೀರ್ತಿ ಹೆಚ್ಚಿಸಿದ್ದಾನೆ. ಅಷ್ಟೇ ಅಲ್ಲ ಈ ಹಿಂದೆ ಜರ್ಮನಿ ಮತ್ತು ಅಥೆನ್ಸ್ ನಲ್ಲಿ ನಡೆದ 24 ವರ್ಷದೊಳಗಿನ ದೇಹದಾಢ್ಯ ಸ್ಪರ್ಧೆಯಲ್ಲೂ ಕೂಡ ಮಿಸ್ಟರ್ ಯೂನಿವರ್ಸ್ ಹಾಗೂ ಮಿಸ್ಟರ್ ಯೂನಿವರ್ಸ್-2014 ಅವಾರ್ಡ್ ಪಡೆದುಕೊಂಡಿದ್ದಾನೆ. ತಂದೆಯ ನಿಧನದ ನಂತರ ವಾಟರ್ ಟ್ಯಾಂಕ್ ಡೈವರ್ ಆಗಿ ಕೆಲಸಕ್ಕೆ ಸೇರಿಕೊಂಡ ಬಾಲಕೃಷ್ಣ, ಸಾಧಿಸುವ ಛಲ ಮಾತ್ರ ಬಿಟ್ಟಿರಲಿಲ್ಲ. ಹೀಗಾಗಿ ಈತ ಬಾಡಿ ಬಿಲ್ಡ್ ಮಾಡಲು ಆರಂಭಿಸಿದ. ಈಗ್ಲೂ ಕೂಡ ಈತ ಟ್ಯಾಂಕರ್ ಡೈವರ್ ಆಗಿಯೇ ಕೆಲಸ ಮಾಡುತ್ತಿದ್ದಾನೆ. ಇದರ ಜೊತೆಗೆ ಪ್ರತಿ ನಿತ್ಯ 6 ಗಂಟೆಗಳ ಕಾಲ ದೇಹ ದಂಡನೆ ಮಾಡಿಕೊಳ್ತಾನೆ..! ಈತನ ಬಹುದೊಡ್ಡ ಸಾಧನೆಯ ಹಿಂದೆ ತರಬೇತುದಾರರಾದ ಪಂಜಾಬ್‍ನ ಮುನೀಷ್ ಕುಮಾರ್ ಹಾಗೂ ಮುಂಬೈನ ಸಂಗ್ರಾಮ್ ಚೌಗ್ಲಾ ಬೆನ್ನೆಲುಬಾಗಿ ನಿಂತಿದ್ದಾರೆ. ದಿನಕ್ಕೆ 750 ಗ್ರಾಂ ಚಿಕನ್, 25 ಮೊಟ್ಟೆ, 300ಗ್ರಾಂ ರೈಸ್, ಹಾಗೂ 200ಗ್ರಾಂ ಪೋಷಕಾಂಶ ಭರಿತ ತರಕಾರಿಗಳನ್ನು ಸೇವಿಸುವುದರರಲ್ಲದೇ 6 ಗಂಟೆಗಳ ಕಾಲ ಕಠಿಣ ಅಭ್ಯಾಸದಲ್ಲಿ ನಿರತರಾಗಿರುತ್ತಾರೆ. ಬಡ ಕುಟುಂಬದಲ್ಲಿ ಹುಟ್ಟಿ ಹಣಕಾಸಿನ ತೊಂದರೆಯನ್ನು ಅನುಭವಿಸುತ್ತಿದ್ದರೂ ಬಾಲಕೃಷ್ಣ ಅವರು ಎಂದು ಕೂಡ ತನ್ನ ಹವ್ಯಾಸವನ್ನು ನಿಲ್ಲಿಸಲೇ ಇಲ್ಲ…
Like us on Facebook The New India Times
POPULAR STORIES :
ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?
ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?
ಜಿಯೋ 4ಜಿ ಉಚಿತ ಕೊಡುಗೆ ಡಿಸೆಂಬರ್ ಬದಲಿಗೆ ಮಾರ್ಚ್‍ವರೆಗೆ ವಿಸ್ತರಣೆ..!
ದರ್ಗಾ ಒಳಗೆ ಮಹಿಳೆಯರ ಪ್ರವೇಶಕ್ಕೆ ಗ್ರೀನ್ ಸಿಗ್ನಲ್ ನೀಡಿದ ಮುಂಬೈ ಟ್ರಸ್ಟ್..!