ಜಾತಿಗಣತಿ ಓದದೆ ಅವೈಜ್ಞಾನಿಕ ಅಂದ್ರೆ ಹೇಗೆ!? ಕಾನೂನು ಸಚಿವರ ಪ್ರಶ್ನೆ!?
ಗದಗ:- ಜಾತಿಗಣತಿ ಓದದೆ ಅವೈಜ್ಞಾನಿಕ ಅಂದ್ರೆ ಹೇಗೆ!? ಎಂದು ಕಾನೂನು ಸಚಿವ ಹೆಚ್ ಕೆ ಪ್ರಶ್ನೆ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಾತಿ ಜನಗಣತಿ ಅವೈಜ್ಞಾನಿಕ ಹೇಗೆ ಆಗುತ್ತದೆ. ಅವೈಜ್ಞಾನಿಕ, ತಪ್ಪು ವರದಿ, ಯಾರೋ ಹೇಳಿ ಬರೆಸಿದ್ದಾರೆ ಎಂಬ ಮಾತುಗಳು ಸಮಾಜವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ. ಇವೆಲ್ಲಾ ಸಮಾಜ ದ್ರೋಹಿ ಮಾತುಗಳು ಎಂದರು.
ಜಾತಿಗಣತಿ ವಿವರಗಳು ಬಹುತೇಕ ಬಹಿರಂಗಗೊಂಡಿವೆ. ನಮಗೂ ಅದರ ಪ್ರತಿಗಳು ದೊರೆತಿವೆ. ಏ.17ರಂದು ವಿಶೇಷ ಕ್ಯಾಬಿನೆಟ್ ಸಭೆ ಕರೆಯಲಾಗಿದೆ. ಇದರಲ್ಲಿ ರಾಜಕಾರಣ ಮಾಡಲು ಹೋಗಬಾರದು. ಸಮೀಕ್ಷೆಗಳು ಏನಿವೆ ಎಂಬುದು ಗೊತ್ತಿಲ್ಲದೆ ತಮ್ಮ ಅಭಿಪ್ರಾಯಗಳನ್ನು ಕೊಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸರ್ಕಾರ ಇನ್ನೂ ಏನು ನಿರ್ಣಯ ಮಾಡಿಲ್ಲ. ಏನು ಸಮೀಕ್ಷೆ ಆಗಿದೆ ಅದನ್ನು ನಾವು ಮಂಡನೆ ಮಾಡಿದ್ದೇವೆ. ಸಿದ್ದರಾಮಯ್ಯ ಅವರ ಮನೆಯಲ್ಲಿ ಜಾತಿ ಗಣತಿ ಬರೆದಿದ್ದಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ. ಯಾವುದಾದರೂ ವರದಿ ಮುಖ್ಯಮಂತ್ರಿ ಮನೆಯಲ್ಲಿ ಬರೆಯಲು ಸಾಧ್ಯನಾ. ಅದರಲ್ಲಿ ತಕರಾರು ಇದ್ದರೆ, ಹೀಗೆ ಮಾಡಿಲ್ಲ. ಹೀಗೆ ಮಾಡಿ ಎಂಬ ಅಭಿಪ್ರಾಯ ಸೂಚಿಸಿರಿ. ಅದನ್ನು ಸರಿಪಡಿಸುವುದು ಇದ್ದರೆ ಮಾಡುತ್ತೇವೆ ಎಂದರು