No menu items!
18.7 C
Munich
Saturday, September 12, 2026

ಹುಬ್ಬಳ್ಳಿ ಮೂಲದ ಉದ್ಯಮಿ ಶವ ಶಿವಮೊಗ್ಗದ ಲಾಡ್ಜ್‌ನಲ್ಲಿ ಪತ್ತೆ!

Must read

ಹುಬ್ಬಳ್ಳಿ ಮೂಲದ ಉದ್ಯಮಿ ಶವ ಶಿವಮೊಗ್ಗದ ಲಾಡ್ಜ್‌ನಲ್ಲಿ ಪತ್ತೆ!

ಶಿವಮೊಗ್ಗ:- ಹುಬ್ಬಳ್ಳಿ ಮೂಲದ ಉದ್ಯಮಿ ಶವ ಶಿವಮೊಗ್ಗದ ಲಾಡ್ಜ್‌ನಲ್ಲಿ ಪತ್ತೆಯಾಗಿದೆ. ಎಸ್, ನಗರದ ಬಿಹೆಚ್ ರಸ್ತೆಯ ಲಾಡ್ಜ್ ಒಂದರಲ್ಲಿ ಹುಬ್ಬಳ್ಳಿ ಮೂಲದ ಉದ್ಯಮಿಯ ಶವ ಪತ್ತೆಯಾಗಿದ್ದು, ಹಲವು ಶಂಕೆಗೆ ಕಾರಣವಾಗಿದೆ.

ಬಸವರಾಜ್ ಮೃತ ಉದ್ಯಮಿ. ಏ.10 ರಂದು ಅವರು ಲಾಡ್ಜ್‌ನಲ್ಲಿ ರೂಮ್ ಮಾಡಿದ್ದರು. ರೂಮ್‍ನಿಂದ ಹೊರ ಬರದ ಕಾರಣ ಲಾಡ್ಜ್ ಸಿಬ್ಬಂದಿ ಅನುಮಾನದಿಂದ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರ ಸಮ್ಮುಖದಲ್ಲಿ ರೂಮ್ ಬಾಗಿಲು ಒಡೆದಾಗ, ಬಾತ್ ರೂಮ್‍ನಲ್ಲಿ ಅವರ ಶವ ಪತ್ತೆಯಾಗಿದೆ.

ಬಸವರಾಜ್ ಆಟೋ ಮೊಬೈಲ್ಸ್ ವ್ಯವಹಾರ ಮಾಡಿಕೊಂಡಿದ್ದರು. ಇದಕ್ಕೂ ಮೊದಲು ಚಿತ್ರ ಹಂಚಿಕೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

- Advertisement -spot_img

More articles

- Advertisement -spot_img

Latest article