ಜಾತಿಗಣತಿ ವಿರುದ್ಧ ಸಿಡಿಮಿಡಿಗೊಂಡ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ!
ಬೆಂಗಳೂರು: ಜಾತಿಗಣತಿ ವಿರುದ್ಧ ಬಿಜೆಪಿ ಮುಖಂಡ ಛಲವಾದಿ ನಾರಾಯಣಸ್ವಾಮಿ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಮುಸ್ಲಿಂ ಸಮುದಾಯದಲ್ಲಿ ಅನೇಕ ಜಾತಿಗಳಿವೆ. ಅದರಲ್ಲಿ ಎಲ್ಲರನ್ನೂ ಒಂದು ಮಾಡಿ ಮುಸ್ಲಿಮರನ್ನು ಅತಿ ಹೆಚ್ಚು ಎಂದು ಬಿಂಬಿಸಿದ್ದಾರೆಂದು ಆಕ್ರೋಶ ಹೊರ ಹಾಕಿದ್ದಾರೆ.
ಇಷ್ಟು ದಿನ ಯಾರು ಅಲ್ಪಸಂಖ್ಯಾತರು ಇದ್ದರು, ಈಗ ಅವರು ಬಹುಸಂಖ್ಯಾತರು ಆಗಿದ್ದಾರೆ. ಹಾಗಿದ್ದರೆ ಅವರಿಗೆ ಅಲ್ಪಸಂಖ್ಯಾತ ಸೌಲಭ್ಯ ಯಾಕೆ? ಕಾಂಗ್ರೆಸ್ ಮಾಡುತ್ತಿರುವುದು ಮುಸ್ಲಿಮರಿಗೆ ಯಾವುದೂ ಉಪಯೋಗಕ್ಕೆ ಬರೋದಿಲ್ಲಾ. ಮುಸ್ಲಿಮರನ್ನು ಅತಿ ಹೆಚ್ಚು ಅಂತ ತೋರಿಸಿ ಅವರಿಗೆ ಇತರರ ಕೆಂಗಣ್ಣಿಗೆ ಗುರಿ ಮಾಡಿದ್ದೀರಿ. ಇದು ಅಲ್ಪಾಯುಶಿ ಸರ್ಕಾರ, ಈ ಸರ್ಕಾರ ಯಾವತ್ತಾದ್ರೂ ಹೋಗಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದಲ್ಲಿ ಜನಾಕ್ರೋಶ ಆರಂಭವಾಗಿ, ಅಭಿವೃದ್ಧಿ ಶೂನ್ಯವಾಗಿದೆ. ಐದು ವರ್ಷ ಆಡಳಿತ ಮುಗಿಸಿದ್ರೆ ಸಾಕು ಎನ್ನುವ ಸ್ಥಿತಿಗೆ ಸರ್ಕಾರ ಬಂದು ತಲುಪಿದೆ. ಇಡೀ ರಾಜ್ಯದಲ್ಲಿ ಗೊಂದಲದಲ್ಲಿದೆ. ಹೀಗಾಗಿ ನಮ್ಮ ಪಕ್ಷ ಜನಾಕ್ರೋಶ ಯಾತ್ರೆ ಕೈಗೊಂಡಿದೆ. ನಾಳೆ ಬೆಳಗಾವಿಯಿಂದ ಎರಡನೇ ಸುತ್ತಿನ ಯಾತ್ರೆ ಆರಂಭವಾಗುತ್ತಿದೆ ಎಂದು ತಿಳಿಸಿದ್ದಾರೆ.