ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಪ್ಪು ತಂಗಿ ಪಾತ್ರದಲ್ಲಿ ನಟಿಸಿದ್ದ ಅಭಿನಯ!
ಕಳೆದ ಕೆಲವು ವಾರಗಳಿಂದ ನಟಿ ಅಭಿನಯ ಮನೆಯಲ್ಲಿ ಮದುವೆಯ ಸಡಗರ ಜೋರಾಗಿದ್ದು, ಇಂದು ಬಹುಕಾಲದ ಗೆಳೆಯನ ಜೊತೆ ನಟಿ ಮದುವೆಯಾಗಿದ್ದಾರೆ. ತನ್ನ 15 ವರ್ಷಗಳ ಗೆಳೆಯನೊಂದಿಗೆ ನಟಿ ಅಭಿನಯ ಮದುವೆ ಆಗಿದ್ದಾರೆ. ನಟಿ ಅಭಿನಯ ಪತಿಯ ಹೆಸರು ಸನ್ನಿ ವರ್ಮಾ. ಮಾರ್ಚ್‌ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ಇದೀಗ ವಿವಾಹವಾಗಿದ್ದಾರೆ.
ಅಭಿನಯ ಮತ್ತು ಸನ್ನಿ ವರ್ಮಾ ಅವರ ಮದುವೆಯ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಭಿನಯ ಅವರ ವಿವಾಹವು ಸಾಂಪ್ರದಾಯಿಕ ಪದ್ಧತಿಗಳ ಪ್ರಕಾರ ಸಂಬಂಧಿಕರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.
ಮಾರ್ಚ್ 9ರಂದು ಗೆಳೆಯ ವೆಗೆಶನಾ ಕಾರ್ತಿಕ್ ಜೊತೆ ಅಭಿನಯ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಆದರೆ ಹುಡುಗನ ಹಿನ್ನೆಲೆ ಮತ್ತು ಮದುವೆ ಯಾವಾಗ ಎಂದು ರಿವೀಲ್ ಮಾಡಿರಲಿಲ್ಲ. ಈಗ ನಟಿಯ ಮದುವೆ ಸುದ್ದಿ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಕೇವಲ ಕನ್ನಡ ಸಿನಿಮಾಗಳು ಮಾತ್ರವಲ್ಲ ತನ್ನ ಅದ್ಭುತ ನಟನೆಯಿಂದ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಚಿರಪರಿಚಿತರಾಗಿದ್ದಾರೆ.