ಉಗ್ರರಿಂದ ಮೃತಪಟ್ಟ ಭರತ್ ಭೂಷಣ್ ಅಂತಿಮ ದರ್ಶನ ಮಾಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಗುಂಡೇಟಿಗೆ ಬಲಿಯಾದ ಇಬ್ಬರು ಕನ್ನಡಿಗರ ಮೃತದೇಹ ಬೆಂಗಳೂರು ತಲುಪಿದೆ. ಶಿವಮೊಗ್ಗ ಉದ್ಯಮಿ ಮಂಜುನಾಥ್ ರಾವ್ ಮತ್ತು ಹಾವೇರಿ ಮೂಲದ ಬೆಂಗಳೂರು ನಿವಾಸಿ ಭರತ್ ಭೂಷಣ್ ಪಾರ್ಥಿವ ಶರೀರ ಬೆಳಗಿನ ಜಾವ ಬೆಂಗಳೂರು ತಲುಪಿದೆ. ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಪಹಲ್ಗಾಮ್ನಲ್ಲಿ ಉಗ್ರರಿಂದ ಹತ್ಯೆಯಾದ ನಗರದ ಭರತ್ ಭೂಷಣ್ ಅವರ ಅಂತಿಮ ದರ್ಶನ ಪಡೆದರು. ಸಿಎಂ ಭೇಟಿಯ ವೇಳೆ, ಮಗುವನ್ನು ತೋರಿಸಿ ಘಟನೆಯ ಭೀಕರತೆಯನ್ನು ಹೇಳಿ ಭರತ್ ಪತ್ನಿ ಸುಜಾತ ಅವರು ಕಣ್ಣಿರಿಟ್ಟರು. ಸಿಎಂ ಮುಂದೆ ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅತ್ತಿದ್ದು, ಮಗುವಿನ ಮುಖ ನೋಡಿ ಸಿಎಂ ಸಹ ಭಾವುಕರಾದರು. ಭರತ್ ಪತ್ನಿ, ಸೋದರಮಾವ ಸೀತಾರಾಮ್ ಹಾಗೂ ಭರತ್ ತಂದೆಯವರಿಗೆ ಸಿಎಂ ಸಾಂತ್ವನ ಹೇಳಿದರು.