ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಯುವ ವಕೀಲೆಯ ಮೃತದೇಹ..! ಪ್ರಮುಖ ಸಾಕ್ಷಿಯಾಗಿದ್ದ ಮತ್ತೊಬ್ಬನೂ ಆತ್ಮಹತ್ಯೆ
ಬೆಂಗಳೂರು: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಯುವ ವಕೀಲೆಯ ಮೃತದೇಹ ಪತ್ತೆಯಾಗಿರೋ ಘಟನೆ ನೆಲಮಂಗಲದಲ್ಲಿ ನಡೆದಿದೆ. ವಕೀಲೆ ಮೃತದೇಹ ಕಂಡು ಕುಟುಂಬದ ಜೊತೆಗಿದ್ದ ಯುವಕನೂ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಕೀಲೆ ರಮ್ಮಾ(26) ಮೃತ ದುರ್ಧೈವಿಯಾಗಿದ್ದು, ಪುನೀತ್(25) ಮನೆಯ ಮತ್ತೊಬ್ಬ ದುರ್ಧೈವಿಯಾಗಿದ್ದಾನೆ.
ರಮ್ಯಾ ಸಾವಿಗೆ ಉದ್ಯಮಿ ದಿನೇಶ್ ಕಾರಣ ಅಂತ ರಮ್ಯಾ ಮಾವನಿಗೆ ಮೃತ ಪುನೀತ್ ವಾಯ್ಸ್ ಮೆಸೇಜ್ ಕಳುಹಿಸಿ ಸಾವನ್ನಪ್ಪಿದ್ದಾರೆ. ತಾಯಿ ಸಮಾಧಿ ನಿರ್ಮಾಣ ವೇಳೆ ರಮ್ಯಾಗೆ ಗ್ರಾನೈಟ್ ಕಲ್ಲು ವ್ಯವಹಾರ ಮಾಡ್ತಿದ್ದ ದಿನೇಶ್ ಪರಿಚಯವಾಗಿದೆ. ಇದೀಗ ಈ ಉದ್ಯಮಿ ಮೇಲೆ ಆರೋಪ ಕೇಳಿ ಬಂದಿದ್ದು, ಎಲ್ಲಾ ರೀತಿಯಲ್ಲೂ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಆರೋಪಿ ಸ್ಥಾನದಲ್ಲಿರುವ ಉದ್ಯಮಿ ದಿನೇಶ್, ಶೆಡ್ ಬಳಿ ಬಂದು ರಮ್ಯಾರನ್ನ ಕೊಂದು ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮೃತದೇಹ ಕಂಡಿದ್ದ ಪ್ರಮುಖ ಸಾಕ್ಷಿಯಾಗಿದ್ದ ಪುನೀತ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಮೃತ ರಮ್ಯಾ ಪೋಷಕರು ಕೊಟ್ಟ ದೂರಿನ ಮೇರೆಗೆ ನೆಲಮಂಗಲ ಗ್ರಾಮಾಂತರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.