ಹೆದ್ದಾರಿಗೆ ಕಾರು ತಂದು ಐವರು ಕುಡುಕರ ಪುಂಡಾಟ: ಪೊಲೀಸರ ಮೇಲೆ ಹಲ್ಲೆಗೆ ಯತ್ನ – ಮೂವರು ಅರೆಸ್ಟ್
ಮಂಡ್ಯ: ಕಂಠಪೂರ್ತಿ ಕುಡಿದು ಹೆದ್ದಾರಿಗೆ ಕಾರು ತಂದು ಐವರು ಕುಡುಕರ ಪುಂಡಾಟ ಮೆರೆದಿದ್ದಲ್ಲದೆ ಕಾರು ವಶಕ್ಕೆ ಪಡೆಯಲು ಬಂದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿರುವ ಘಟನೆ ಮಂಡ್ಯ ನಗರದ ಸಂಜಯ್ ವೃತ್ತದಲ್ಲಿ ನಡೆದಿದೆ.
ಕಾರನ್ನು ಬೆನ್ನಟ್ಟಿ ನಂದಾ ವೃತ್ತದಲ್ಲಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾನು ಲಾಯರ್, ನನ್ನ ತಡೆಯಲು ನೀನ್ಯಾರು ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ಪೊಲೀಸರಿಗೆ ಅವ್ಯಾಚ್ಯ ಶಬ್ದದಿಂದ ನಿಂದಿಸಿ ಮೂವರಿಂದ ಪೊಲೀಸರ ಮೇಲೆ ಹಲ್ಲೆ ಯತ್ನಿಸಲಾಗಿದೆ. ಹೆಚ್ಚಿನ ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆ ಐವರಲ್ಲಿ ಇಬ್ಬರು ಪರಾರಿ ಆಗಿದ್ದಾರೆ.
ಕಂಠ ಪೂರ್ತಿ ಕುಡಿದು ದರ್ಫ, ದಾಂಧಲೆ ಮಾಡ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿ ನೊಂದಣಿ ಸಂಖ್ಯೆ ಇದ್ದು, ಕಾರಿಗೆ ಲಾಯರ್ ಚಿಹ್ನೆ ಬಳಸಿಕೊಂಡು ಪುಂಡರು ಓಡಾಡ್ತಿದ್ದರು. ವಶಕ್ಕೆ ಪಡೆದ ಮೂವರನ್ನು ಮಿಮ್ಸ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.