ಕಾಂತಾರ ಶೂಟಿಂಗ್ ವೇಳೆ ಜೂನಿಯರ್ ಕಲಾವಿದ ದುರಂತ ಸಾವು..!
ಕಾಂತಾರಾ – 1 ಸಿನಿಮಾ ಸೆಟ್ ನಲ್ಲಿ ಜೂನಿಯರ್ ಆರ್ಟಿಸ್ಟ್ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ಕೊಲ್ಲೂರಿನಲ್ಲಿ ನಡೆದಿದೆ. ಕೇರಳ ಮೂಲದ ಜೂನಿಯರ್ ಆರ್ಟಿಸ್ಟ್ ಕಪಿಲ್ ಮೃತ ದುರ್ಧೈವಿಯಾಗಿದ್ದು, ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಮುಳಗಿ ಸಾವನ್ನಪ್ಪಿದ್ದಾನೆ. ಸ್ಥಳೀಯರು ಹಾಗೂ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ಸಂಜೆ ಮೃತದೇಹ ಪತ್ತೆ ಹಚ್ಚಿದ್ದರು. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ದೈವ ನುಡಿದಂತೆ ಕಾಂತಾರಾ -1 ಚಿತ್ರೀಕರಣಕ್ಕೆ ಸಂಕಷ್ಟ ಎದುರಾದಂತಾಗಿದೆ.