ಲಾರಿ ಮತ್ತು ಕಾರಿನ ನಡುವೆ ಭೀಕರ ರಸ್ತೆ ಅಪಘಾತ: 6 ಜನರು ಸ್ಥಳದಲ್ಲೇ ಸಾವು
ಹಾವೇರಿ: ಲಾರಿಗೆ ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನರು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ಬಳಿ ನಡೆದಿದೆ. ಹರಿಹರ ನಿವಾಸಿ ಫರಾನ್ (27), ರಾಣೆಬೆನ್ನೂರು ನಿವಾಸಿ ಎಮ್ಮಿಶಿಪಾ (16), ಗೋವಾದ ಪಣಜಿ ನಿವಾಸಿಗಳಾದ ಅಲಿಷಾ (20), ಪುಲಖಾನ್ (17) ಮೃತರು. ತಷ್ಕಿನ್ ರಾಣೆಬೆನ್ನೂರು, ಪಿರೋಜ್ ಗಾಯಗೊಂಡವರು.
ಗಾಯಾಳುಗಳನ್ನು ಕಾರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಜಾಸ್ತಿ ವೇಗ ಹಿನ್ನೆಲೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತ್ತಿದ್ದ ಲಾರಿಗೆ ಕಾರು ಚಾಲಕ ಡಿಕ್ಕಿ ಹೊಡಿದಿದ್ದಾನೆ. ಪರಿಣಾಮ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸದ್ಯ ಹಾವೇರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶವಗಳ ರವಾನೆ ಮಾಡಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಬ್ಯಾಡಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.