ಟಿಎಂಸಿ ಸರ್ಕಾರಕ್ಕೆಅಭಿವೃದ್ಧಿಗಿಂತ ರಾಜಕೀಯವೇ ಹೆಚ್ಚು ಬೇಕಿದೆ: ಪ್ರಧಾನಿ ಮೋದಿ
ಪಶ್ಚಿಮ ಬಂಗಾಳ: ಟಿಎಂಸಿ ಸರ್ಕಾರಕ್ಕೆಅಭಿವೃದ್ಧಿಗಿಂತ ರಾಜಕೀಯವೇ ಹೆಚ್ಚು ಬೇಕಿದೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ಬಂಗಾಳದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಪಶ್ಚಿಮ ಬಂಗಾಳ ಸರಣಿ ಬಿಕ್ಕಟ್ಟಿನಿಂದ ಬಳಲುತ್ತಿದೆ. ಜನರಿಗೆ ‘ನಿರ್ಮಾಮ್ ಸರ್ಕಾರ’ ಬೇಡವಾಗಿದೆ. ಅವರಿಗೆ ಬದಲಾವಣೆ ಮತ್ತು ಉತ್ತಮ ಆಡಳಿತ ಬೇಕಿದೆ. ಬಂಗಾಳಿ ಜನರಿಗೆ ಕ್ರೂರ ಮತ್ತು ಭ್ರಷ್ಟಾಚಾರ ಸರ್ಕಾರ ಬೇಕಾಗಿಲ್ಲ ಎಂದು ಹೇಳಿದರು.
ಹಿಂಸಾಚಾರ ಮತ್ತು ಕಾನೂನು ಅವ್ಯವಸ್ಥೆ ಸಮಾಜವನ್ನು ಹರಿದು ಹಾಕುತ್ತಿದೆ. ಅಪರಾಧ ಕೃತ್ಯಗಳಿಂದಾಗಿ ತಾಯಂದಿರು ಮತ್ತು ಸಹೋದರಿಯರಲ್ಲಿ ಅಭದ್ರತೆ ಕಾಡುತ್ತಿದೆ. ಬಂಗಾಳದ ಮೂರನೇ ಬಿಕ್ಕಟ್ಟು ಯುವ ಜನತೆಯನ್ನು ಕಾಡುವ ನಿರುದ್ಯೋಗ, ಅವಕಾಶಗಳ ಕೊರತೆ. ನಾಲ್ಕನೇಯದು ವ್ಯವಸ್ಥೆಯಲ್ಲಿ ಹೆಚ್ಚಾಗಿರುವ ಭ್ರಷ್ಟಾಚಾರ. ಐದನೇ ಬಿಕ್ಕಟ್ಟು ಆಡಳಿತ ಪಕ್ಷದ ತಮ್ಮ ಲಾಭಕ್ಕಾಗಿ ಮಾಡುತ್ತಿರುವ ರಾಜಕೀಯ. ಇದರಿಂದ ಬಡವರು ಸರಿಯಾದ ಸೌಲಭ್ಯ ಸಿಗದೇ ಬಳಲುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದರು.