ಚಿನ್ನಾಭರಣ ಪ್ರಿಯರಿಗೆ ಬಿಗ್ ಶಾಕ್: ಮತ್ತೆ ಭಾರೀ ಏರಿಕೆ ಕಂಡ ಚಿನ್ನದ ಬೆಲೆ
ಬಂಗಾರ ಕೇವಲ ವ್ಯಕ್ತಿಯ ಸಂಪತ್ತನ್ನಲ್ಲದೆ ದೇಶದ ಆರ್ಥಿಕ ಶಕ್ತಿಯ ಸಂಕೇತವೂ ಆಗಿದ್ದು, ಇಂದು ಯಾವುದೇ ದೇಶ ತಾನು ಹೊಂದಿರುವ ಚಿನ್ನದ ಪ್ರಮಾಣಕ್ಕನುಗುಣವಾಗಿ ತನ್ನ ಆರ್ಥಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದರೆ ತಪ್ಪಾಗಲಾರದು. ಭಾರತದಲ್ಲಿ ಚಿನ್ನಕ್ಕೆ ದೊಡ್ಡದಾದ ಮಾರುಕಟ್ಟೆ ಇದ್ದು ನಿತ್ಯ ಕೋಟ್ಯಂತರ ರೂಪಾಯಿಗಳಷ್ಟು ಚಿನ್ನದ ವಹಿವಾಟು ನಡೆಯುತ್ತಲೇ ಇರುತ್ತದೆ.
ಇಂದು ಶುಕ್ರವಾರ ಚಿನ್ನದ ಬೆಲೆ ಗ್ರಾಮ್ಗೆ 25 ರೂ ಏರಿಕೆ ಆಗಿದೆ. ಬೆಳ್ಳಿ ಬೆಲೆ ಯಥಾಸ್ಥಿತಿಯಲ್ಲಿದೆ. 22 ಕ್ಯಾರಟ್ ಆಭರಣ ಚಿನ್ನದ ಬೆಲೆ 8,920 ರೂ ಮುಟ್ಟಿದೆ. 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 9,731 ರೂಗೆ ಏರಿದೆ. ಬೆಳ್ಳಿ ಬೆಲೆ ಭಾರತದಲ್ಲಿ 100 ರೂ ಮತ್ತು 111 ರೂನಲ್ಲಿ ಮುಂದುವರಿದಿದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 30ಕ್ಕೆ)
• 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,200 ರೂ
• 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,310 ರೂ
• 18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 72,990 ರೂ
• ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
• 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 89,200 ರೂ
• 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 97,310 ರೂ
• ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ