ಬಿಜೆಪಿ, ಜೆಡಿಎಸ್ ನಾಯಕರು ಶವಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ: ಸಚಿವ ಎಂಸಿ ಸುಧಾಕರ್
ಚಿಕ್ಕಬಳ್ಳಾಪುರ: ಬಿಜೆಪಿ, ಜೆಡಿಎಸ್ ನಾಯಕರು ಶವಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಸಚಿವ ಎಂಸಿ ಸುಧಾಕರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪಹಲ್ಗಾಮ್ ಘಟನೆ ಕುಂಭಮೇಳ ಘಟನೆಯನ್ನು ನಾವು ಟೀಕಿಸಿಲ್ಲ. ಬಿಜೆಪಿ, ಜೆಡಿಎಸ್ ನಾಯಕರು ಶವಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೃತ ಪಟ್ಟವರ ಬಗ್ಗೆ ಬಿಜೆಪಿ, ಜೆಡಿಎಸ್ ಗೆ ಕರುಣೆ ಇಲ್ಲ. ಬಿಜೆಪಿ, ಜೆಡಿಎಸ್ ಶವಗಳ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಪನ್ ಪರೇಡ್ಗೆ ಬಿಟ್ಟಿಲ್ಲ ಅಂದಾಗ ವಿಪಕ್ಷದವರೇ ಕ್ರೀಡಾಭಿಮಾನಿಗಳ ವಿರೋಧಿ ಸರ್ಕಾರ ಎಂದು ಟ್ವೀಟ್ ಮಾಡಿದ್ದರು. ದುರ್ಘಟನೆ ಆದ ಕೂಡಲೇ ಬೇರೆ ರೀತಿ ಯಾಕೆ ಮಾತಾಡ್ತೀರಾ? ಅನಾಹುತ ಆಗಬಹುದು ಎಂದು ಸರ್ಕಾರದ ಗಮನಕ್ಕೂ ಇತ್ತು. ಆದರೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದಿದ್ದು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ಬಹಳ ಪಂದ್ಯಗಳು ನಡೆದಿವೆ, ಸಾವಿರಾರು ಜನ ಬಂದಿರೋ ಜಾಗ ಅದು. ಐದಾರು ಪಂದ್ಯಕ್ಕೆ ಬರುವ ಜನ ಒಂದೇ ಬಾರಿ ಬಂದಿದ್ದಾರೆ. ಹಾಗಂತ ನಾವು ಸಮರ್ಥನೆ ಮಾಡಿಕೊಳ್ಳಲು ಸಾಧ್ಯ ಇಲ್ಲ ಎಂದು ಹೇಳಿದರು.