ನಾಳೆಯಿಂದ ರಾಜ್ಯದಲ್ಲಿ ವರುಣನ ಆರ್ಭಟ ಜೋರು: ಈ 9 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಇತ್ತೀಚಿನ ದಿನಗಳಿಂದ ಸುರಿಯುತ್ತಿರುವ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿದೆ. ನಗರ ಪ್ರದೇಶಗಳಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದೆ. ರಸ್ತೆ ಪೂರ್ತಿ ಜಲಾವೃತಗೊಂಡಿದೆ. ತಗ್ಗಿನ ಪ್ರದೇಶಕ್ಕೆ ಮಳೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಇದರ ನಡುವೆ ಕರ್ನಾಟಕದಾದ್ಯಂತ ಜೂನ್ 13ರಿಂದ ಮುಂಗಾರು ಚುರುಕುಗೊಳ್ಳಲಿದೆ.
9 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ.ವಿಜಯನಗರ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಬಳ್ಳಾರಿ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮಂಗಳೂರು, ಕೋಟಾ, ಮುಲ್ಕಿ, ಕುಂದಾಪುರ, ಚಿಟಗುಪ್ಪ, ಭಾಲ್ಕಿ, ದಾವಣಗೆರೆ, ಬೇಗೂರು, ಹರಪನಹಳ್ಳಿ, ಬಾಳೆಹೊನ್ನೂರು, ದಾವಣಗೆರೆ, ಗೌರಿಬಿದನೂರು, ಕಕ್ಕೇರಿ, ಮೂಡುಬಿದಿರೆ, ಮಾಣಿ, ಹುಮ್ನಾಬಾದ್, ಲಕ್ಷ್ಮೇಶ್ವರ, ಲಿಂಗಸುಗೂರು, ಯಡ್ರಾಮಿ, ಕಮಲಾಪುರ, ಶಾಹಪುರ,ಬೀದರ್, ಚನ್ನಗಿರಿ, ಚಾಮರಾಜನಗರ, ಕೃಷ್ಣರಾಜಪೇಟೆಯಲ್ಲಿ ಮಳೆಯಾಗಿದೆ.