ಬೆಂಗಳೂರಿನಲ್ಲಿ ಫ್ಲ್ಯಾಟ್ ಖರೀದಿಸುವವರು ಎಚ್ಚರ.. ಎಚ್ಚರ..!
ಬೆಂಗಳೂರು: ಫ್ಲ್ಯಾಟ್ ಖರೀದಿಯ ಸಮಯದಲ್ಲಿ ಅಗತ್ಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದಿದ್ದರೆ ಹೇಗೆ ವಂಚನೆಗೆ ಒಳಗಾಗಬಹುದು ಎಂಬುದಕ್ಕೆ ಈ ಘಟನೆ ಸ್ಪಷ್ಟ ಉದಾಹರಣೆ. ಬೆಂಗಳೂರು ಪಶ್ಚಿಮ ವಿಭಾಗದ ಸಶಸ್ತ್ರ ಮೀಸಲು ಪಡೆಯ ಡಿಸಿಪಿ ವಿ.ಸಿ. ಗೋಪಾಲರೆಡ್ಡಿ ಅವರು ಸ್ವತಃ 28 ಲಕ್ಷ ರೂಪಾಯಿ ನೀಡಿ ಫ್ಲ್ಯಾಟ್ ಖರೀದಿಸಿದ್ದರೂ, ಇದೀಗ ಅವರು ಹಣವನ್ನೂ ಕಳೆದುಕೊಂಡಿದ್ದಾರೆ, ಮನೆಯ ಹಕ್ಕೂ ಸಿಕ್ಕಿಲ್ಲ.
2023ರ ಜುಲೈನಲ್ಲಿ, ಉತ್ತರಹಳ್ಳಿಯ ಕಗ್ಗಲೀಪುರದಲ್ಲಿರುವ ಶಂಕರ ಮೆಡೋಸ್ ಅಪಾರ್ಟ್ಮೆಂಟ್ನ 6ನೇ ಮಹಡಿಯಲ್ಲಿ ಫ್ಲ್ಯಾಟ್ ಖರೀದಿಸಲು ಅವರು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹರಾಜಿಯಲ್ಲಿ ಹಣ ಪಾವತಿಸಿದರು. ಆದರೆ ಖರೀದಿಸಿದ ಫ್ಲ್ಯಾಟ್ ಮೇಲೆ ಈಗ ಸ್ವರ್ಣ ಭಾರತಿ ಸಹಕಾರ ಬ್ಯಾಂಕ್ ಹಕ್ಕುಹುರಿದಿದ್ದು, ಸಾಲ ಮರುಪಾವತಿ ಆಗದ ಕಾರಣ ಅದನ್ನು ಜಪ್ತಿ ಮಾಡಲಾಗಿದೆ.
ಈ ಘಟನೆ ಹಿನ್ನೆಲೆ, ಡಿಸಿಪಿ ಗೋಪಾಲರೆಡ್ಡಿ ಅವರು ಸಿಸಿಬಿಗೆ ದೂರು ನೀಡಿದ್ದಾರೆ. ಈ ಸಂಬಂಧ ಬ್ಯಾಂಕ್ನ ಕೆಲ ಸಿಬ್ಬಂದಿಗಳಾದ ರಾಜೇಶ್, ಬಾಬು ಸರ್ಜಿತ್ ಮತ್ತು ಉಮೇಶ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಪ್ರಕರಣವು, ಮನೆ ಅಥವಾ ಫ್ಲ್ಯಾಟ್ ಖರೀದಿಸುವ ಪ್ರಕ್ರಿಯೆಯಲ್ಲಿ ಎಲ್ಲಾ ದಾಖಲೆಗಳ ಪರಿಶೀಲನೆ ಹೇಗೆ ಅನಿವಾರ್ಯ ಎಂಬುದನ್ನು ಪುನರುಚಿಸುತ್ತದೆ.