500,1000 ನೋಟುಗಳ ಬ್ಯಾನ್ ಮಾಡೋ ಯೋಜನೆಯ ಹಿಂದಿರೋ ವ್ಯಕ್ತಿ ಯಾರು ಗೊತ್ತಾ.?

Date:

500,1000 ನೋಟುಗಳು ರದ್ದಾಗಿದ್ದು,ನಮ್ಮ ದೇಶದಲ್ಲಿ ಚಲಾವಣೆಯಾಗುತ್ತಿರೋ ನಕಲು ನೋಟುಗಳ ನಿರ್ಮೂಲನಕ್ಕೆ ಹಾಗೂ ಕಪ್ಪು ಹಣ ಹೊಂದಿರುವವರಿಗೆ ಒಂದು ಪಾಠವೂ ಹೌದು.ಅವರೀಗ ಭಯಭೀತರಾಗುವಂತಹ ಸಮಯ.ಈ ಭ್ರಷ್ಟಾಚಾರ ಹಾಗೂ ಕಪ್ಪು ಹಣವು ನಮ್ಮ ದೇಶದ ಬಡತನವನ್ನು ನೀಗಿಸಲು ಅಡ್ದಗೋಡೆಯಾಗಿದೆ ಎಂದು ಪ್ರಧಾನಿಯವರು ತಮ್ಮ ಭಾಷಣದಲ್ಲಿ ತಿಳಿಸಿದ್ದರು. ಸ್ವಲ್ಪ ಮಟ್ಟಿಗೆ ಜನ ಸಾಮಾನ್ಯರಿಗೆ ಇದು ತೊಂದರೆ ನೀಡಿದರೂ ಮುಂದೊಂದು ದಿನ ಇದು ದೇಶದ ಒಳಿತಿಗೆ ಕಾರಣವಾಗುತ್ತದೆ ಎಂದೂ ಅವರು ಹೇಳಿದರು. ಹಲವರು ಸರಕಾರದ ಈ ನಿರ್ಧಾರವನ್ನು ನಾಟಕೀಯವಾದದ್ದು ಹಾಗೂ ವಿವೇಚನೆ ಇಲ್ಲದ್ದು ಎಂದೆಲ್ಲಾ ವಿರೋಧಿಸಿದರೂ ಸಹ,ಇದೊಂದು ಪೂರ್ವ ಯೋಜಿತ ಹಾಗೂ ಪೂರ್ವ ಸಿದ್ದತೆಗೊಂಡು ನೀಡಲಾದ ತೀರ್ಮಾನವಾಗಿದೆ. ಈ ಯೋಜನೆಯ ಹಿಂದಿನ ರಹಸ್ಯ ತಿಳಿಯಬೇಕೇನು??? ಹಾಗಿದ್ರೆ ಕೇಳಿ…
ಈ ಯೋಜನೆಯ ಬಗ್ಗೆ ಪ್ರಧಾನಿಯವರು ಹಣಕಾಸು ಸಚಿವರಾದ ಅರುಣ್ ಜೇಟ್ಲಿಯ ಬಳಿ ಮಾತುಕತೆಯಾದ ಬಳಿಕ, ಜೇಟ್ಲಿ ಯವರು ಕಳೆದ ಗುರುವಾರದಂದು ಎಲ್ಲಾ ರಾಜ್ಯದ ರಿಸರ್ವ್ ಬ್ಯಾಂಕ್ ನ ಡೈರೆಕ್ಟರ್ ನ್ನು ಭೇಟಿಯಾಗಿ 500,1000 ನೋಟುಗಳ ತಡೆಯ ಬಗೆಗಿನ ಪ್ರಸ್ತಾಪವನ್ನು ಅವರ ಮುಂದಿಟ್ಟರು. ಮೊದಲಿಗೆ ಕೆಲವೊಂದು ಡೈರೆಕ್ಟರು ಈ ನಿರ್ಧಾರವನ್ನು ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ವಿರೋಧಿಸಿದರೂ ಸಹಾ ಜೇಟ್ಲಿಯವರು ಈ ವಿಶ್ಯದ ಬಗ್ಗೆ ಸೀಕ್ರೆಟ್ ಮೈನ್ಟೈನ್ ಮಾಡಬೇಕೆಂದು ಹೇಳಿದ್ದರು.ಮತ್ತೆ ಮರು ಶುಕ್ರವಾರದಂದು ಪ್ರಧಾನಿ ಮತ್ತೊಮ್ಮೆ ಜೇಟ್ಲಿಯವರನ್ನು ಭೇಟಿಯಾಗಿ ಈ ಯೋಜನೆಯ ಬಗ್ಗೆ ಸಂಪೂರ್ಣ ನಿರ್ಧಾರ ತೆಗೆದುಕೊಂಡರು. ಮಂಗಳವಾರದಂದು ರಿಸರ್ವ್ ಬ್ಯಾಂಕ್ ನ ರೀಜನಲ್ ಆಫೀಸಿಗೆ ಹಣಕಾಸು ಸಚಿವಾಲಯದಿಂದ ಒಂದು ಫ್ಯಾಕ್ಸ್ ಬಂತು..ಅದೇನೆಂದರೆ ಮರುದಿನದಿಂದ 500, 1000 ದ ನೋಟುಗಳನ್ನು ಸ್ವೀಕರಿಸಬಾರದು ಎಂದಾಗಿತ್ತು.
ಆದರೆ…ಸ್ವಲ್ಪ ನಿಲ್ಲಿ…ಅಲ್ಲಿ ಈ ಎಲ್ಲಾ ಯೋಜನೆಗಳ ಹಿಂದೆ ಓರ್ವ ವ್ಯಕ್ತಿ ಇದ್ದರು..ಅವರುಯಾರೆಂದು ಗೊತ್ತೇ??? ಅವರೇ…ಅನಿಲ್ ಬೋಕಿಲ್.
ಅನಿಲ್ ಬೋಕಿಲ್ ಓರ್ವ ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಪೂನಾ ಮೂಲದ ಅರ್ಥಕ್ರಾಂತಿ ಸಂಸ್ಥಾನದ ಹಣಕಾಸು ವಿಭಾಗದಲ್ಲಿರೋ ಓರ್ವ ಸದಸ್ಯ.
ಈತ ಪ್ರಧಾನಿಯವರನ್ನು ಕಳೆದ ಜುಲೈ ತಿಂಗಳಿನಲ್ಲಿ ಭೇಟಿಯಾಗಿ,ನಮ್ಮ ದೇಶದ ಅರ್ಥವ್ಯವಸ್ಥೆಯನ್ನು ಸುಧಾರಿಸಲು ಕೆಲವೊಂದು ಸಲಹೆಯನ್ನು ಪ್ರಧಾನಿಯವರ ಮುಂದೆ ಪ್ರಸ್ತುತ ಪಡಿಸಿದ್ದರು…ಅವುಗಳು..
1.ಎಲ್ಲಾ 56 ತೆರಿಗೆಗಳ ಸಂಗ್ರಹಣೆಯನ್ನು(ಆದಾಯ ತೆರಿಗೆಯನ್ನೊಳಗೊಂಡಂತೆ)ನಿಲ್ಲಿಸಿ ಕೇವಲ ಆಮದು (ಇಂಪೋರ್ಟ್) ಸುಂಕ ಮಾತ್ರ ಜಾರಿಯಲ್ಲಿರಿಸಬೇಕು.
2.ಹೈ ಡಿನಾಮಿನೇಷನ್ ಕರೆನ್ಸಿಗಳಾದ 500,1000 ಹಾಗೂ 100 ರೂಗಳನ್ನೊಳಗೊಂಡಂತೆ ಇವಗಳನ್ನು ಹಿಂತೆಗೆದು ಇವುಗಳ ಚಲಾವಣೆಯನ್ನು ನಿಲ್ಲಿಸಬೇಕು.
3.ಬ್ಯಾಂಕ್ ಮೂಲಕ ಚೆಕ್,ಡಿ.ಡಿ ಹಾಗೂ ಎಲೆಕ್ಟ್ರಾನಿಕ್ ಟ್ರಾನ್ಸ್ಫರ್ ಮೂಲಕವಷ್ಟೇ ನಾವು ಅಧಿಕ ಮೊತ್ತದ ವಹಿವಾಟುಗಳನ್ನು ನಡೆಸಬೇಕು.
4.ನಗದು ವಹಿವಾಟಿನ ಮೇಲೆ ನಿಬಂಧನೆಯನ್ನಿತ್ತು, ಅದನ್ನು ತೆರಿಗೆ ರಹಿತವನ್ನಾಗಿಸಬೇಕು.
5.ಸರಕಾರಕ್ಕೆ ಆದಾಯ ಸಂಗ್ರಹಿಸಲು, ಕೇವಲ ಒಂದೇ ಒಂದು ತೆರಿಗೆಯ ವ್ಯವಸ್ಥೆಯನ್ನು ಕೇಂದ್ರ ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಜಾರಿಗೊಳಿಸಬೇಕು.
ನಿಜಕ್ಕೂ ಇದೊಂದು ಗ್ರೇಟ್ ಐಡಿಯಾ!ಮೋದಿಯವರ ಈ ನಿರ್ಧಾರಕ್ಕೆ ಈ ಚಾರ್ಟರ್ಡ್ ಅಕೌಂಟೆಂಟ್ ಪ್ರಭಾವವೇ ಇರಬಹುದು…ಏನಂತೀರಾ????

Like us on Facebook  The New India Times

POPULAR  STORIES :

ಮಾಸ್ತಿಗುಡಿ ದುರಂತ: ಕ್ಲೈಮ್ಯಾಕ್ಸ್ ಐಡಿಯಾ ಕೊಟ್ಟವರು ಯಾರು ಗೊತ್ತಾ..?

ಟ್ರಂಪ್‍ಗಿಂತ 25 ವರ್ಷ ಚಿಕ್ಕವಳಂತೆ ಮೆಲಾನಿಯಾ..!

2.5 ಲಕ್ಷಕ್ಕೂ ಅಧಿಕ ಡೆಪಾಸಿಟ್‍ಗಳಿಗೆ ಟ್ಯಾಕ್ಸ್ ಭೀತಿ..!

500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..

ಬಂಕ್‍ಗಳಲ್ಲಿ 500, 1000ರೂ. ನೋಟು ಪಡೆಯದಿದ್ದರೆ ಕಠಿಣ ಕ್ರಮ: ಸಚಿವ ಧರ್ಮೇಂದ್ರ ಪ್ರಧಾನ್.

ಅಮೇರಿಕಾ ಅಧ್ಯಕ್ಷೀಯ ಚುನಾವಣೆ: ಡೊನಾಲ್ಡ್ ಟ್ರಂಪ್‍ಗೆ ಐತಿಹಾಸಿಕ ಜಯ.

ಮನಸ್ಸಿಗೆ ಬಂದ ಫೇಸ್‍ಬುಕ್ ಗೆಳತಿ ಮನೆ ಬೆಳಗುವಳಾ.? | ರಿಯಲ್ ಸ್ಟೋರಿ

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...