ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

Date:

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಚಿನ್ನ ಖರೀದಿಗೆ ವಿಶೇಷ ದಿನ ಬೇಕಾಗಿಲ್ಲ ಏಕೆಂದರೆ ಬಂಗಾರದ ಮಹತ್ವ ಅಂತಹದ್ದಾಗಿದೆ. ಬಂಗಾರವಿದ್ದರೆ ಆಪತ್ತಿಗೆ ಆದೀತು ಎಂದು ಚಿನ್ನಕ್ಕೆ ಹಣ ಹೂಡಿಕೆ ಮಾಡುತ್ತಿದ್ದಾರೆ. ಚಿನ್ನದ ಬೆಲೆ ಎಂಬುದು ಎಂದಿಗೂ ಸ್ಥಿರವಾಗಿರುವುದಿಲ್ಲ. ಆಯಾ ಸ್ಥಳಗಳ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜರುಗುವ ಹಲವಾರು ವಿದ್ಯಮಾನಗಳಿಂದಾಗಿ ಬದಲಾಗುತ್ತಲೇ ಇರುತ್ತದೆ.

ಆದಾಗ್ಯೂ ಕಳೆದ ಹಲವು ದಶಕಗಳನ್ನು ಗಮನಿಸಿದರೆ ಚಿನ್ನದ ಬೆಲೆಯಲ್ಲಿ ಒಂದು ಸ್ಥಿರವಾದ ಏರಿಕೆ ಇದೆಯೇ ಹೊರತು ಕುಸಿತವಿಲ್ಲ. ನೀವೂ ಕೂಡ ಚಿನ್ನ ಖರೀದಿ ಮಾಡೋ ಪ್ಲ್ಯಾನ್‌ ಮಾಡಿದ್ದರೆ ಇವತ್ತಿನ ಮಾರುಕಟ್ಟೆಯ ದರವನ್ನು ನೋಡ್ಕೋಬಿಡಿ. ದೇಶೀಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 10,588 ರೂಪಾಯಿಗೆ ಏರಿಕೆ ಆಗಿದ್ದು,ಇಂದು 93 ರುಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 85 ರೂಪಾಯಿ ಹೆಚ್ಚಳ ಆಗಿದ್ದು, 9,705 ರುಪಾಯಿಗೆ ಏರಿಕೆ ಆಗಿದೆ.

24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 930 ರೂ ಹೆಚ್ಚಳ ಆಗಿ, 1,05,880 ರುಪಾಯಿಗೆ ಏರಿಕೆ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 850 ರೂ ಹೆಚ್ಚಳ ಆಗಿ 97,050 ರೂ ಆಗಿದೆ. ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 10,588 ರೂ ಇದೆ. ಬೆಳ್ಳಿಯ ಬೆಲೆ ಕೂಡಾ 1 ರೂ ಹೆಚ್ಚಳ ಆಗಿ. ,ಗ್ರಾಂ ಬೆಲೆ 126 ರೂ ಆಗಿದ್ದು, ಕೆಜಿ ಬೆಲೆ 1,26,000 ರೂ ಆಗಿದೆ.

Share post:

Subscribe

spot_imgspot_img

Popular

More like this
Related

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ

ಮೈಸೂರು ಅರಮನೆ ಮುಂಭಾಗ ಹೀಲಿಯಂ ಗ್ಯಾಸ್ ಸ್ಫೋಟ: ಓರ್ವ ಸಾವು, ಮೂವರಿಗೆ...