ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು?

Date:

ನಾವು ಬಿಸಾಡುವ ಈ ವಸ್ತುವಿಗಿದೆ ವಿಷ ಸರ್ಪ ಓಡಿಸುವ ಶಕ್ತಿ; ಯಾವುದು?

ನಮ್ಮ ದೇಶದಲ್ಲಿ ಧಾರ್ಮಿಕವಾಗಿ ಹಾವುಗಳನ್ನು ಪೂಜಿಸಲಾಗುತ್ತದೆ. ನಾಗರ ಪಂಚಮಿಯ ದಿನದಂದು ಜನರು ಹಾವುಗಳಿಗೆ ಹಾಲೆರೆದು ಪೂಜೆ ಮಾಡುತ್ತಾರೆ. ಅನೇಕ ಜನರು ಹಾವನ್ನು ಕಂಡರೆ ಬೆಚ್ಚಿ ಬೀಳುತ್ತಾರೆ. ಅಲ್ಲದೇ ಕೆಲವರಂತೂ ಹಾವುಗಳು ಅಂದ್ರೆ ಸಾಕು ಭಯಪಡುತ್ತಾರೆ. ಆದರೆ ಇಲ್ಲಿ ನಾವು ತಿಳಿದುಕೊಳ್ಳಬೇಕಾದ ವಿಷಯವಂದ್ರೆ, ಹಾವುಗಳಿಗೆ ನಾವು ಎಷ್ಟು ಭಯಪಡುತ್ತೇವೆಯೋ, ಅಷ್ಟೇ ಅವುಗಳು ಕೂಡಾ ಮನುಷ್ಯರಿಗೆ ಭಯಪಡುತ್ತದೆ.

ಹಾವುಗಳು ಕೂಡ ಕೆಲವು ವಿಷಯಗಳಿಗೆ ಹೆದರುತ್ತವೆ. ಹಾವುಗಳು ಕೆಲವು ವಾಸನೆಗಳಿಗೆ ಬಹಳಷ್ಟು ಭಯಪಡುತ್ತದೆ ಮತ್ತು ಅಷ್ಟೇ ಅಲ್ಲ ಇದರಿಂದ ಬೇಗನೆ ಓಡಿಹೋಗುತ್ತವೆ. ಹಾಗಾಗಿ, ಒಂದು ಹಾವು ಮನೆಯೊಳಗೆ ಪ್ರವೇಶಿಸಿದರೆ, ಅದನ್ನು ಕೊಲ್ಲುವ ಬದಲು, ತಕ್ಷಣ ಕೆಲವು ಪರಿಹಾರಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಮನೆಗೆ ಬಂದ ತಕ್ಷಣ ಹಾವು ಓಡಿಹೋಗುತ್ತದೆ.

ಮಳೆಯ ಕಾಲದಲ್ಲಿ ಅಥವಾ ಚಳಿಗಾಲದ ವೇಳೆ ಹಾವುಗಳು ಮನೆಯ ಹತ್ತಿರ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಕೆಲವು ಸರಳ ನೈಸರ್ಗಿಕ ಉಪಾಯಗಳು ಹಾವುಗಳನ್ನು ಮನೆಯಿಂದ ದೂರ ಇಡಬಹುದು ಎಂಬುದು ನಿಮಗೆ ಗೊತ್ತಾ? ನಮ್ಮ ಅಡಿಗೆಮನೆ ಅಥವಾ ತೋಟದಲ್ಲೇ ಇರುವ ಕೆಲವು ವಸ್ತುಗಳು ಹಾವುಗಳಿಗೆ ವಿಷದಂತಿವೆ.

ನಾಫ್ತಲೀನ್ ಬಾಲ್‌ಗಳು ಹಾವುಗಳನ್ನು ತಡೆಯಲು ಬಹಳ ಪರಿಣಾಮಕಾರಿ. ಈ ಬಾಲ್‌ಗಳ ತೀಕ್ಷ್ಣ ವಾಸನೆಗೆ ಹಾವುಗಳು ತಾಳಲಾರವು. ಬಾಗಿಲು, ಕಿಟಕಿ ಅಥವಾ ಹಾವು ಬರುವ ಸಾಧ್ಯತೆ ಇರುವ ಪ್ರದೇಶಗಳಲ್ಲಿ ಇವು ಇಟ್ಟರೆ ಹಾವು ಹತ್ತಿರ ಬರುವುದಿಲ್ಲ. ಅದೇ ರೀತಿ, ಕಾಫಿ ಪುಡಿ ಮತ್ತು ತುಪ್ಪ ಅಥವಾ ಪೆಟ್ರೋಲ್ ಮಿಶ್ರಣವನ್ನು ಸುಟ್ಟರೆ, ಆ ಹೊಗೆ ಹಾವುಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಹಾವುಗಳಿಗೆ ಈ ವಾಸನೆ ತುಂಬಾ ಅಸಹನೀಯ.

ಇನ್ನೊಂದು ನೈಸರ್ಗಿಕ ವಿಧಾನವೆಂದರೆ ಬೆಳ್ಳುಳ್ಳಿ ಮತ್ತು ಈರುಳ್ಳಿ. ಹಾವುಗಳು ಈ ಎರಡು ವಸ್ತುಗಳ ವಾಸನೆಗೆ ತಾಳಲಾರವು. ಬೆಳ್ಳುಳ್ಳಿ ಹಾಗೂ ಈರುಳ್ಳಿಯ ಪುಡಿಯನ್ನು ಮನೆಯ ಸುತ್ತ ಹಚ್ಚಿದರೆ ಅಥವಾ ಹಾವು ಬರುವ ಸ್ಥಳಗಳಲ್ಲಿ ಇಟ್ಟರೆ, ಅವು ಹತ್ತಿರ ಬರೋದಿಲ್ಲ. ಅದೇ ರೀತಿಯಲ್ಲಿ ಕರಿಮೆಣಸು ಮತ್ತು ಉಪ್ಪಿನ ಮಿಶ್ರಣ ಸಹ ಪರಿಣಾಮಕಾರಿ.

ನೈಸರ್ಗಿಕವಾಗಿ ಹಾವುಗಳನ್ನು ತಡೆಯುವ ಮತ್ತೊಂದು ಉತ್ತಮ ಮಾರ್ಗವೆಂದರೆ ಲೆಮನ್‌ಗ್ರಾಸ್ ಅಥವಾ ಪುದೀನಾ ಸಸಿಗಳನ್ನು ನೆಡುವುದು. ಈ ಸಸ್ಯಗಳ ವಾಸನೆ ಹಾವುಗಳಿಗೆ ಅಸಹನೀಯವಾಗಿರುವುದರಿಂದ, ಮನೆಯನ್ನು ಸುತ್ತ ನೆಟ್ಟರೆ ಹಾವುಗಳು ಆ ಪ್ರದೇಶದತ್ತ ಬರಲಾರವು. ಅಂತಿಮವಾಗಿ, ಮನೆಯ ಸುತ್ತ ಬೆಳಕು ಮತ್ತು ಶಬ್ದ ಇದ್ದರೆ ಹಾವುಗಳು ಅಲ್ಲಿ ವಾಸಿಸಲು ಇಷ್ಟಪಡುವುದಿಲ್ಲ. ಹಾವುಗಳು ಕತ್ತಲು ಮತ್ತು ಶಾಂತ ಸ್ಥಳವನ್ನು ಆರಿಸುತ್ತವೆ. ಆದ್ದರಿಂದ ಮನೆ ಸುತ್ತಲೂ ಬೆಳಕು ಮತ್ತು ಚಲನೆ ಇರುವುದು ಅವುಗಳನ್ನು ದೂರ ಇಡುತ್ತದೆ.

ಈ ಸರಳ ಉಪಾಯಗಳನ್ನು ಅನುಸರಿಸಿದರೆ ಹಾವುಗಳಿಂದ ನಿಮ್ಮ ಮನೆ ಸುರಕ್ಷಿತವಾಗಿರಬಹುದು. ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೆ, ನೈಸರ್ಗಿಕವಾಗಿ ಹಾವುಗಳನ್ನು ತಡೆಯುವ ಇದು ಅತ್ಯಂತ ಸುರಕ್ಷಿತ ಮಾರ್ಗವಾಗಿದೆ.

Share post:

Subscribe

spot_imgspot_img

Popular

More like this
Related

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ

ಬಿಎಂಟಿಸಿ ಚಾಲಕನ ಯಡವಟ್ಟು: 9 ವಾಹನಗಳಿಗೆ ಡಿಕ್ಕಿ ಬೆಂಗಳೂರು: ಬೆಂಗಳೂರಿನಲ್ಲಿ ಬಿಎಂಟಿಸಿ ಚಾಲಕನ...

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು ಬಲಿ

9 ವರ್ಷದ ಬಾಲಕಿ ಮೇಲೆ ಹರಿದ ಬಸ್: ಬಿಎಂಟಿಸಿ ಬಸ್ಗೆ ಮತ್ತೊಂದು...

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್

ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ: ಡಿ.ಕೆ.ಶಿವಕುಮಾರ್ ಬೆಂಗಳೂರು: ರಸ್ತೆ...

ಮಧುಮೇಹಿಗಳಿಗೆ ಲವಂಗದ ನೀರು ವರದಾನ

ಮಧುಮೇಹಿಗಳಿಗೆ ಲವಂಗದ ನೀರು ವರದಾನ: ಬೆಳಿಗ್ಗೆ ಈ ನೀರು ಕುಡಿಯುವುದರಿಂದ ಬ್ಲಡ್...