No menu items!
20.3 C
Munich
Monday, June 15, 2026

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

Must read

ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಒಳ್ಳೆಯದೇ? ಇಲ್ಲಿದೆ ಉತ್ತರ

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನೋದು ಆರೋಗ್ಯಕ್ಕೆ ಬಹುಮುಖ್ಯವಾಗಿದೆ! ಬೆಳ್ಳುಳ್ಳಿಯಲ್ಲಿ ವಿಟಮಿನ್ C, A, B, ಮೆಗ್ನೀಸಿಯಂ, ಕ್ಯಾಲ್ಸಿಯಂ, ಸಲು ಮತ್ತು ಸೆಲೆನಿಯಂ ಇದ್ದು ದೇಹಕ್ಕೆ ನಾನಾ ರೀತಿಯಲ್ಲಿ ಉಪಕಾರಿಸುತ್ತದೆ.

ಹೃದಯ ಆರೋಗ್ಯಕ್ಕೆ ರಕ್ಷಕ:
ಬೆಳ್ಳುಳ್ಳಿ ರಕ್ತದ ಒತ್ತಡ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ (LDL) ಕಡಿಮೆಮಾಡಿ ಒಳ್ಳೆಯ ಕೊಲೆಸ್ಟ್ರಾಲ್ (HDL) ಹೆಚ್ಚಿಸುವ ಮೂಲಕ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.

ಜೀರ್ಣಾಂಗ ಬಲಪಡಿಸುವುದು:
ಬೆಳ್ಳುಳ್ಳಿಯ ಪ್ರಿಬಯೋಟಿಕ್ ಅಂಶಗಳು ಜೀರ್ಣಾಂಗದ ಒಳ್ಳೆಯ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯಮಾಡುತ್ತವೆ. ಅಜೀರ್ಣ, ಆಮ್ಲೀಯತೆ ಮತ್ತು ಹೊಟ್ಟೆ ಉಬ್ಬುವಿಕೆ ಇರುವವರಿಗೆ ಬೆಳ್ಳುಳ್ಳಿ ಸಹಾಯಕಾರಿಯಾಗಿದೆ.

ದೇಹದ ಶುದ್ಧಿ ಮತ್ತು ನಿರ್ವಿಷಕಾರಕ:
ಅಲಿಸಿನ್ ಅಂಶದಿಂದ ಯಕೃತ್ತಿನ ಕಾರ್ಯಕ್ಷಮತೆ ಸುಧಾರಿಸಿ, ವಿಷಕಾರಿ ಪದಾರ್ಥಗಳನ್ನು ದೇಹದಿಂದ ಹೊರಹಾಕುತ್ತದೆ. ಇದರಿಂದ ಚರ್ಮ ಹೊಳೆಯುತ್ತದೆ ಮತ್ತು ಶಕ್ತಿ ಹೆಚ್ಚುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಳ:
ಬೆಳ್ಳುಳ್ಳಿಯ ಅಲಿಸಿನ್ ಬಿಳಿ ರಕ್ತಕಣಗಳ ಚಟುವಟಿಕೆಯನ್ನು ಹೆಚ್ಚಿಸಿ, ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ.

ಹೀಗಾಗಿ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನುವುದರಿಂದ ದೇಹದ ಆರೋಗ್ಯ, ಶಕ್ತಿ ಮತ್ತು ರೋಗನಿರೋಧಕ ಶಕ್ತಿ ಸದೃಢವಾಗುತ್ತದೆ.

- Advertisement -spot_img

More articles

- Advertisement -spot_img

Latest article