ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!
ಚಿಕ್ಕಮಗಳೂರು: ಕಡೂರಿನ ಬಸವೇಶ್ವರ ವೃತ್ತದಲ್ಲಿ ಭಾನುವಾರ ರಾತ್ರಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರ ಅಳಿಯ ಸಂದೇಶ್ ಮೇಲೆ ಐವರು ಯುವಕರು ನಡು ರಸ್ತೆಯಲ್ಲಿ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಸಂದೇಶ್ ಬೆಂಗಳೂರಿನಿಂದ ಹಿಂದಿರುಗುವ ವೇಳೆ ರಸ್ತೆ ಸೈಡ್ ಬಿಡುವ ವಿಚಾರಕ್ಕೆ ವಾಗ್ವಾದ ಉಂಟಾಗಿ, ಹಲ್ಲೆ ನಡೆದಿರುವುದು ತಿಳಿದು ಬಂದಿದೆ.
ಹಲ್ಲೆ ಮಾಡಿದವರು ಹಾಲಿ ಶಾಸಕ ಕೆ.ಎಸ್. ಆನಂದ್ ಅವರ ಸಂಬಂಧಿಗಳು ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ. ಘಟನೆಯನ್ನು ಖಂಡಿಸಿ ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅವರು 500ಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಮಧ್ಯರಾತ್ರಿಯೇ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಈ ಸಂಬಂಧ ಸಂತೋಷ್ ಸೇರಿದಂತೆ ಐವರ ವಿರುದ್ಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






