ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!
ಬೆಂಗಳೂರು: ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಗಗನ್ ಮತ್ತು ನೀತಿನ್ ನನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಹಲಸೂರು ಗೇಟ್, ಹೈಗ್ರೌಂಡ್, ಉಪ್ಪಾರಪೇಟೆ, ಬಸವನಗುಡಿ, ಬಾಗಲಗುಂಟೆ, ರಾಜಾಜಿನಗರ, ಮಲ್ಲೇಶ್ವರಂ, ಹೊಸಪೇಟೆ, ಹುಬ್ಬಳ್ಳಿ ಮತ್ತು ತಿಪಟೂರಿನ ಅಂಗಡಿಗಳ ಶೆಟರ್ ಮುರಿದು ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದರೆಂದು ಬಹಿರಂಗವಾಗಿದೆ.
ಅವರು ರಾತ್ರಿ ವೇಳೆ ಮುಖಕ್ಕೆ ಮಾಸ್ಕ್ ಧರಿಸಿ, ಕಬ್ಬಿಣದ ರಾಡ್ ಬಳಸಿ ಅಂಗಡಿಗಳೊಳಗೆ ನುಗ್ಗಿ ಕಳ್ಳತನ ಮಾಡುತ್ತಿದ್ದರು. ಅನೇಕ ಬಾರಿ ಜೈಲು ಪ್ರವೇಶಿಸಿದರೂ ಕಳ್ಳತನದ ಹಾದಿ ಬಿಡದೇ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಐಷಾರಾಮಿ ಜೀವನಕ್ಕಾಗಿ ಕಳ್ಳತನ ಮಾಡ್ತಿದ್ದ ಇಬ್ಬರು ಅರೆಸ್ಟ್!
Date:






