ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ
ಬೆಂಗಳೂರು: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಇಳಿಕೆ ಕಂಡಿವೆ. ನಿನ್ನೆ ಗ್ರಾಮ್‌ಗೆ ₹70 ಏರಿಕೆಯಾದ ಚಿನ್ನದ ಬೆಲೆ, ಇಂದು ₹100 ರಷ್ಟು ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಅಪರಂಜಿ ಚಿನ್ನದ ಬೆಲೆ ₹12,000 ಗಡಿ ಸಮೀಪಕ್ಕೆ ಇಳಿದಿದೆ. ವಿದೇಶಿ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕುಸಿದಿದ್ದು, ದೇಶೀಯ ಮಾರುಕಟ್ಟೆಯ ಮೇಲೂ ಅದರ ಪ್ರಭಾವ ಕಂಡುಬಂದಿದೆ.
ಬೆಳ್ಳಿ ಬೆಲೆಯೂ ಇಂದು ₹1 ಇಳಿಕೆಯಾಗಿದೆ. ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,10,450, ಹಾಗು 24 ಕ್ಯಾರಟ್ (ಅಪರಂಜಿ) ಚಿನ್ನದ ಬೆಲೆ ₹1,20,490 ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ ₹15,100 ರೂ ಆಗಿದೆ.
ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ದರ ಇದೇ ರೀತಿಯಲ್ಲಿ ಮುಂದುವರಿದಿದ್ದು, 10 ಗ್ರಾಂ ಚಿನ್ನ (22 ಕ್ಯಾರಟ್) ₹1,10,450, ಬೆಳ್ಳಿ 100 ಗ್ರಾಂ ₹15,100 ರೂ ದರದಲ್ಲಿ ಮಾರಾಟವಾಗುತ್ತಿದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಬೆಳ್ಳಿ ದರ ₹16,500 ರೂ ತಲುಪಿದೆ.






