ನಂದಿನಿ ತುಪ್ಪದ ಬೆಲೆ ಏರಿಕೆ: ಗ್ರಾಹಕರಿಗೆ ಸಿಗಲಿಲ್ಲ GST ಇಳಿಕೆ ಲಾಭ
ಬೆಂಗಳೂರು: ಕರ್ನಾಟಕ ಮಿಲ್ಕ್ ಫೆಡರೇಷನ್ (ಕೆಎಂಎಫ್) ತನ್ನ ತುಪ್ಪದ ಬೆಲೆಯಲ್ಲಿ ದಿಢೀರ್ ಹೆಚ್ಚಳ ಮಾಡಿದೆ.. ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ. ಈಗ ಒಂದು ಲೀಟರ್ ಕೆಎಂಎಫ್ ತುಪ್ಪಕ್ಕೆ 90 ರೂಪಾಯಿ ಹೆಚ್ಚಳವಾಗಿ 700 ರೂಪಾಯಿಗಳ ದರದಲ್ಲಿ ಮಾರಾಟವಾಗುತ್ತಿದೆ.
ಮೊದಲು ಈ ಬೆಲೆ 610 ರೂಪಾಯಿಗಳಲ್ಲಿ ಮಾರಾಟವಾಗುತ್ತಿತ್ತು. ಜಿಎಸ್‌ಟಿ ಸ್ಲ್ಯಾಬ್ ಸುಧಾರಣೆಗೆ ಮುಂಚೆ ತುಪ್ಪದ ದರ 650 ರೂಪಾಯಿ ಆಗಿದ್ದು, ಸುಧಾರಣೆಯ ನಂತರ 40 ರೂಪಾಯಿ ಇಳಿಕೆ ಮಾಡಲಾಗಿತ್ತು. ಆದರೆ, ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ಬೆಲೆ ಏರಿಕೆಯ ಪರಿಣಾಮವಾಗಿ, ಅನಿವಾರ್ಯವಾಗಿ ದರ ಹೆಚ್ಚಳವನ್ನು ಮಾಡಬೇಕಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಎಂಎಫ್ ತುಪ್ಪದ ದರವನ್ನು ದೀಡೀರ್ ಲಿಟರ್‌ಗೆ 90 ರೂಪಾಯಿ ಹೆಚ್ಚಳ ಮಾಡಿರುವ ಸರ್ಕಾರದ ಇಬ್ಬಂದಿತನ ತೋರಿಸಿದೆ. ಈ ಮೊದಲು ಬೆಲೆ ಹೆ್ಚ್ಚಳಕ್ಕೆ ಜಿಎಸ್‌ಟಿ ಮೇಲೆ ಗೂಬೆ ಕೂರಿಸಲಾಗುತ್ತಿತ್ತು. ಆದರೆ ಜಿಎಸ್‌ಟಿ ಸ್ಲ್ಯಾಬ್ ಸುಧಾರಣೆಯಿಂದಾಗಿದೆ. ತುಪ್ಪದ ಬೆಲೆ ಇಳಿಸಿ ನಂತರ ಇದೀಗ ವಿಶ್ವ ಮಾರುಕಟ್ಟೆಯ ನೆಪದಲ್ಲಿ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರ ಮೇಲೆ ಹೊರೆಯನ್ನು ಹೇರಿದೆ.






