ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ: ನಿಖಿಲ್ ಕುಮಾರಸ್ವಾಮಿ
ಬೆಂಗಳೂರು: ನನಗೆ ಈಗಲೇ ಅಧಿಕಾರ ಬೇಕು ಅಂತ ಇಲ್ಲ, ಪಕ್ಷಕ್ಕಾಗಿ ದುಡಿಯುತ್ತೇನೆ. ಸ್ವತಂತ್ರ ಸರ್ಕಾರ ತರಬೇಕು ಅನ್ನೋದು ದೇವೇಗೌಡರ ಆಸೆ, ಅದಕ್ಕೆ ನಾನು ಕಾರ್ಯಕರ್ತನಾಗಿ ನಾನು ಕೆಲಸ ಮಾಡ್ತೀನಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.
ಸಭೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರ ನಿಖಿಲ್ ಕುಮಾರಸ್ವಾಮಿ ಅವರು: ಗ್ಯಾರಂಟಿ ಯೋಜನೆಗಳನ್ನ ಫಲಾನುಭವಿಗಳಿಗೆ ನೀಡ್ತಿವಿ ಎಂದು ಹೇಳಿದರು. ಆದರೆ ಜನ ಕಾಂಗ್ರೆಸ್ ಸರ್ಕಾರವನ್ನ ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಜನರ ಭಾವನೆಗೆ ಸ್ಪಂದಿಸಿ ಫ್ರೀಡಂ ಪಾರ್ಕ್ ನಲ್ಲಿ ಸಾಕಪ್ಪ ಸಾಕು ಹೋರಾಟ ಮಾಡಿದ್ವಿ. ಇನ್ನು ಸರ್ಕಾರದ ವಿರುದ್ಧ ಹೋರಾಟಗಳು ದೊಡ್ಡ ಮಟ್ಟದಲ್ಲಿ ಹೆಚ್ಚಾಗಿ ಮಾಡುತ್ತೇವೆ ಎಂದು ಹೇಳಿದರು.
ಅತಿವೃಷ್ಟಿ ಸಂದರ್ಭದಲ್ಲಿ ಯಾದಗಿರಿ , ಬೀದರ್ , ಕಲಬುರಗಿ ಜಿಲ್ಲೆಗೆ ಜೆಡಿಎಸ್ ನಿಯೋಗ ಭೇಟಿ ನೀಡಿ ರೈತರ ಸಮಸ್ಯೆಗಳನ್ನ ಆಲಿಸಿದ್ದೇವೆ. ರೈತರ ಬೆಂಬಲಕ್ಕೆ ಸ್ಪಂದಿಸಿ ಎಂದು ಸರ್ಕಾರಕ್ಕೆ ಒತ್ತಡ ಹಾಕಿದ್ವಿ. ಆದರೆ ಈ ಸರ್ಕಾರ ರೈತರ ನೆರವಿಗೆ ಬಂದಿಲ್ಲ. ಇದು ರೈತ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.






