No menu items!
15.1 C
Munich
Saturday, June 13, 2026

ಹಿಟ್ಟಿನ ಹುಳಿ ರುಚಿಯನ್ನು ಕಡಿಮೆ ಮಾಡಲು ಕೆಲವು ಪರಿಣಾಮಕಾರಿ ವಿಧಾನ

Must read

ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆ ಹಾಗೂ ಫ್ರಿಜ್ ತಾಪಮಾನ ಅಸ್ಥಿರತೆಯಿಂದಾಗಿ ಇಡ್ಲಿ–ದೋಸೆ ಹಿಟ್ಟು ಬೇಗನೆ ಹುಳಿಯಾಗುತ್ತಿರುವುದಾಗಿ ಹಲವೆಡೆ ಮನೆಮಂದಿ ದೂರು ಹೇಳುತ್ತಿದ್ದಾರೆ. ದಕ್ಷಿಣ ಭಾರತೀಯರ ದಿನಚರಿಯಲ್ಲಿ ಅವಿಭಾಜ್ಯವಾದ ಈ ಉಪಹಾರಕ್ಕೆ ಸಂಬಂಧಿಸಿದ ಸಮಸ್ಯೆಗೆ ಸರಳ ಪರಿಹಾರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆಯುತ್ತಿವೆ.

ಗೃಹಿಣಿಯರು ಮತ್ತು ಫುಡ್ ಬ್ಲಾಗರ್‌ಗಳು ಹಿಟ್ಟಿನ ಹುಳಿ ರುಚಿಯನ್ನು ಕಡಿಮೆ ಮಾಡಲು ಕೆಲವು ಪರಿಣಾಮಕಾರಿ ವಿಧಾನಗಳನ್ನು ಹಂಚಿಕೊಂಡಿದ್ದಾರೆ.

🔹 ಶುಂಠಿ–ಹಸಿ ಮೆಣಸಿನಕಾಯಿ ಪೇಸ್ಟ್
ಹುಳಿಯಾದ ಹಿಟ್ಟಿಗೆ ಸ್ವಲ್ಪ ಶುಂಠಿ ಹಾಗೂ ಹಸಿ ಮೆಣಸಿನಕಾಯಿ ಪೇಸ್ಟ್ ಸೇರಿಸುವುದರಿಂದ ಹುಳಿ ರುಚಿ ಕಡಿಮೆಯಾಗುವುದರ ಜೊತೆಗೆ ಹೊಸ ಸುವಾಸನೆ ದೊರೆಯುತ್ತದೆ ಎಂದು ತಿಳಿಸಲಾಗಿದೆ.

🔹 ಸಕ್ಕರೆ ಅಥವಾ ಬೆಲ್ಲ
ಒಂದು ಚಿಟಿಕೆ ಸಕ್ಕರೆ ಅಥವಾ ಸ್ವಲ್ಪ ಬೆಲ್ಲ ಸೇರಿಸಿ 10 ನಿಮಿಷ ಬಿಡಿಸಿದರೆ ಹುಳಿ ತಗ್ಗಿ ಹಿಟ್ಟು ಮತ್ತೆ ತಾಜಾ ರುಚಿ ಪಡೆಯುತ್ತದೆ.

🔹 ಅಕ್ಕಿ ಹಿಟ್ಟು
ಸ್ವಲ್ಪ ಅಕ್ಕಿ ಹಿಟ್ಟು ಸೇರಿಸುವ ಮೂಲಕ ಹುಳಿ ರುಚಿಯನ್ನು ಬ್ಯಾಲೆನ್ಸ್ ಮಾಡಬಹುದು. ಇದರಿಂದ ದೋಸೆ ಕೂಡಾ ಇನ್ನಷ್ಟು ಕ್ರಿಸ್ಪಿಯಾಗುತ್ತದೆ ಎನ್ನಲಾಗಿದೆ.

🔹 ರವೆ
ಹುಳಿಯಾದ ಹಿಟ್ಟಿಗೆ ಕಡಿಮೆ ಪ್ರಮಾಣದ ರವೆ ಸೇರಿಸಿದರೆ ಹಿಟ್ಟು ಗಟ್ಟಿಯಾಗುವುದರ ಜೊತೆಗೆ ದೋಸೆ ಗರಿಗರಿಯಾಗಿ ತಯಾರಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

- Advertisement -spot_img

More articles

- Advertisement -spot_img

Latest article