ಬೆಳ್ಳಂಬೆಳಗ್ಗೆ ಬೆಂಗಳೂರು ಸೇರಿ ರಾಜ್ಯಾದ್ಯಂತ 10 ಕಡೆ ಲೋಕಾಯುಕ್ತ ದಾಳಿ
ಬೆಂಗಳೂರು: ರಾಜ್ಯದಲ್ಲಿ ಇಂದು ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ರಾಜ್ಯದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಲಾಗಿದೆ. ಹಲವಾರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಈ ದಾಳಿ ನಡೆದಿದೆ. ಆದಾಯಕ್ಕಿಂತ ಹೆಚ್ಚುವರಿ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆ ಈ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.
ದಾಳಿಗೆ ಒಳಗಾದ ಸರ್ಕಾರಿ ಅಧಿಕಾರಿಗಳ ಪಟ್ಟಿ:
ಬೆಂಗಳೂರು (ಎಲೆಕ್ಟ್ರಾನಿಕ್ ಸಿಟಿ) – RTO ಸೂಪರಿಂಟೆಂಡೆಂಟ್ ಕುಮಾರಸ್ವಾಮಿ
ಮಂಡ್ಯ – ನಗರ ಪಾಲಿಕೆ CAO ಪುಟ್ಟಸ್ವಾಮಿ
ಬೀದರ್ – ಕೃಷ್ಣಾ ಮೇಲ್ದಂಡೆ ಯೋಜನೆ ಮುಖ್ಯ ಇಂಜಿನಿಯರ್ ಪ್ರೇಮ್ ಸಿಂಗ್
ಮೈಸೂರು – ಹೂಟಗಳ್ಳಿ ನಗರ ಪಾಲಿಕೆ ರೆವಿನ್ಯೂ ಇನ್ಸ್‌ಪೆಕ್ಟರ್ ರಾಮಸ್ವಾಮಿ C
ಧಾರವಾಡ – ಕರ್ನಾಟಕ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಸುಭಾಶ್ ಚಂದ್ರ
ಧಾರವಾಡ – ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹುಲಿಗೋಲ್ ಹಿರಿಯ ಪರೀಕ್ಷಕ ಸತೀಶ್
ಶಿವಮೊಗ್ಗ – SIMS ಮೆಡಿಕಲ್ ಕಾಲೇಜಿನ FDA ಲಕ್ಷ್ಮೀಪತಿ C.N
ದಾವಣಗೆರೆ – APMC ಸಹ ನಿರ್ದೇಶಕ ಪ್ರಭು J
ಮೈಸೂರು – ಮಡಿಕೇರಿ PWD ಸ.ಅ. ಇಂಜಿನಿಯರ್ ಗಿರೀಶ್ D.M
ಹಾವೇರಿ – ಶೇಕಪ್ಪ, EE, ಯೋಜನಾ ನಿರ್ದೇಶಕ ಕಚೇರಿ ಹಾವೇರಿ
ಲೋಕಾಯುಕ್ತ ತಂಡಗಳು ದಾಖಲೆಪತ್ರಗಳು, ಬ್ಯಾಂಕ್ ವಿವರಗಳು, ಆಸ್ತಿ ದಾಖಲೆಗಳು ಮತ್ತು ನಗದು/ನಗದು ಸಮಾನ ವಸ್ತುಗಳ ಪರಿಶೀಲನೆಯನ್ನು ನಡೆಸುತ್ತಿವೆ. ಹೆಚ್ಚಿನ ವಿವರಗಳು ಬಳಿಕ ಹೊರಬರಲಿವೆ.






