ನಾನ್ ಬರ್ತಿದ್ದೀನಿ ಚಿನ್ನ: ‘ಡೆವಿಲ್’ ಟ್ರೈಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಸ ಚಿತ್ರ ‘ಡೆವಿಲ್’ ಸಿನಿಮಾ ಡಿಸೆಂಬರ್ 11 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಈ ಚಿತ್ರದ ಟ್ರೈಲರ್ ಡಿಸೆಂಬರ್ 5 ರಂದು ಬೆಳಗ್ಗೆ 10:05ಕ್ಕೆ ಬಿಡುಗಡೆ ಮಾಡಲು ದಿನಾಂಕ ನಿಗದಿಯಾಗಿದೆ.

ಚಿತ್ರತಂಡವು ಟ್ರೈಲರ್ ಅನೌನ್ಸ್ಮೆಂಟ್ ಮಾಡಿರುವ ರೀತಿಯೂ ವಿಭಿನ್ನವಾಗಿದೆ. ದರ್ಶನ್ ಅವರ ಧ್ವನಿಯಲ್ಲಿ “‘ನಾನ್ ಬರ್ತಿದ್ದೀನಿ ಚಿನ್ನ’” ಎಂದು ಟ್ರೈಲರ್ ರಿಲೀಸ್ ದಿನಾಂಕ ಘೋಷಿಸಿದ್ದು, ದರ್ಶನ್ ಅಭಿಮಾನಿಗಳಿಗೆ ವಿಶೇಷ ಆನಂದವನ್ನು ನೀಡಿದೆ. ಈಗಾಗಲೇ ‘ಡೆವಿಲ್’ ಚಿತ್ರದ ಎರಡು ಹಾಡುಗಳು ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆಗಾಗಿ ದರ್ಶನ್ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.






