ವಸತಿ ಯೋಜನೆಯಡಿ ಸಹಾಯಧನ ಮತ್ತು ಘಟಕ ವೆಚ್ಚ ಹೆಚ್ಚಿಸಲು ಪ್ರಸ್ತಾವನೆ: ರಾಮಲಿಂಗಾ ರೆಡ್ಡಿ

Date:

ವಸತಿ ಯೋಜನೆಯಡಿ ಸಹಾಯಧನ ಮತ್ತು ಘಟಕ ವೆಚ್ಚ ಹೆಚ್ಚಿಸಲು ಪ್ರಸ್ತಾವನೆ: ರಾಮಲಿಂಗಾ ರೆಡ್ಡಿ

ಬೆಳಗಾವಿ: ರಾಜ್ಯದಲ್ಲಿ ವಿವಿಧ ವಸತಿ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಸಹಾಯಧನ ಹೆಚ್ಚಿಸುವ ಮತ್ತು ಘಟಕ ವೆಚ್ಚ ಹೆಚ್ಚಿಸುವ ಪ್ರಸ್ತಾವನೆಯು ಪರಿಶೀಲನೆಯಲ್ಲಿದೆ ಎಂದು ವಸತಿ, ವಖ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಅವರ ಪರವಾಗಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ಡಿ. ಟಿ. ಶ್ರೀನಿವಾಸ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
2024-2025 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಅವಾಸ್ ಯೋಜನೆ(ಗ್ರಾ)ರಡಿ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳಡಿ ಮರು ಹಂಚಿಕೆ ಮಾಡಲಾದ 36,150 ಮನೆಗಳನ್ನು ಒಳಗೊಂಡಂತೆ ಒಟ್ಟಾರೆ 7,38,881 ಮನೆಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದ್ದು, 3,27,747 ಮನೆಗಳಿಗೆ ಮಂಜೂರಾತಿ ನೀಡಲಾಗಿದೆ
ಅಲೆಮಾರಿ ಜನಾಂಗದವರಿಗೆ 2024-25ನೇ ಸಾಲಿನಲ್ಲಿ ಪ್ರತ್ಯೇಕವಾಗಿ ಗುರಿ ಹಂಚಿಕೆಯಾಗಿರುವುದಿಲ್ಲ. ಅಲೆಮಾರಿ ವರ್ಗದ ವಸತಿರಹಿತರನ್ನು ಒಳಗೊಂಡಂತೆ ಎಲ್ಲಾ ವಸತಿರಹಿತರಿಗೆ ವಸತಿ ಸೌಕರ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

Share post:

Subscribe

spot_imgspot_img

Popular

More like this
Related

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ

ರಾಜ್ಯದಲ್ಲಿ ಅಗ್ನಿಶಾಮಕ ವಾಹನಗಳ ಖರೀದಿಗೆ ಕ್ರಮ: ಡಾ.ಜಿ.ಪರಮೇಶ್ವರ ಬೆಳಗಾವಿ: ರಾಜ್ಯದ ವಿವಿಧ ಅಗ್ನಿಶಾಮಕ...

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್ ಫಿಲ್ಮ್

ಬೆಂಗಳೂರು ರಸ್ತೆ ರೋಡ್ ರೇಜ್: ಯುವ ನಿರ್ದೇಶಕ ಸೂರ್ಯ ಹೊಸ ಶಾರ್ಟ್...

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್. ವೈದ್ಯ

ವಸತಿ ರಹಿತ ಮೀನುಗಾರರಿಗೆ 10,000 ವಸತಿ ನೀಡಿದ್ದೇವೆ: ಸಚಿವ ಮಂಕಾಳ ಎಸ್....

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ ಮಾಡಲು ಪ್ರಸ್ತಾವನೆ: ಡಿ.ಕೆ.ಶಿವಕುಮಾರ್

ನವನಗರದಲ್ಲಿ 200 ಎಕರೆ ಪ್ರದೇಶದಲ್ಲಿನ ವಸತಿ ನಿವೇಶಗಳನ್ನು ವಾಣಿಜ್ಯ ನಿವೇಶನಗಳನ್ನಾಗಿ ಪರಿವರ್ತನೆ...