Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಪಂದ್ಯಕ್ಕೆ ನಿರಾಕರಣೆ

Date:

Vijay Hazare Trophy: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಪಂದ್ಯಕ್ಕೆ ನಿರಾಕರಣೆ

ಬೆಂಗಳೂರು: ವಿಜಯ್ ಹಜಾರೆ ಟೂರ್ನಿಯ ಮೂಲಕ ಡಿಸೆಂಬರ್ 24ರಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ದೆಹಲಿ ಮತ್ತು ಆಂಧ್ರ ಪ್ರದೇಶ ತಂಡಗಳ ನಡುವಿನ ಪಂದ್ಯಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಈ ಪಂದ್ಯವನ್ನು ಆಯೋಜಿಸುವ ಕನಸು ಹೊಂದಿತ್ತು.

ಸೋಮವಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಸ್ಟೇಡಿಯಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಗ್ನಿಶಾಮಕ ದಳದ ಅಧಿಕಾರಿಗಳ ಸಹ ಪರಿಶೀಲನೆಯ ನಂತರ, ವರದಿ ನಕಾರಾತ್ಮಕವಾಗಿದ್ದು, ಪಂದ್ಯವನ್ನು ಆಯೋಜಿಸಲು ಸೂಕ್ತವಲ್ಲ ಎಂದು ತಿಳಿಸಿತು.

ಈ ಕಾರಣದಿಂದ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಪಂದ್ಯ ಆಯೋಜನೆಯು ಸಾಧ್ಯವಾಗುತ್ತಿಲ್ಲ. ದೆಹಲಿ ಪರ ವಿರಾಟ್ ಕೊಹ್ಲಿ ಕಣಕ್ಕಿಳಿಯುತ್ತಿರುವುದರಿಂದ, ಪಂದ್ಯ ಎಲ್ಲರ ಗಮನದ ಕೇಂದ್ರಬಿಂದುವಾಗಿತ್ತು.

ಸದ್ಯದ ಮಾಹಿತಿ ಪ್ರಕಾರ, ಈ ಮ್ಯಾಚ್​ ಅನ್ನು ಆಲೂರಿನಲ್ಲಿರುವ ಕೆಎಸ್​ಸಿಎ ಮೈದಾನದಲ್ಲಿ ನಡೆಸುವ ಸಾಧ್ಯತೆಯಿದೆ. ಆದರೆ ನಾಳೆಯೇ ಈ ಮ್ಯಾಚ್ ನಡೆಯಲಿದೆಯಾ ಎಂಬುದರ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಏಕೆಂದರೆ ನಾಳೆ ಆಲೂರಿನಲ್ಲಿ ಮೂರು ಮ್ಯಾಚ್​ಗಳು ನಡೆಯಲಿದೆ.

ಗ್ರೌಂಡ್ ಒಂದರಲ್ಲಿ ಒರಿಸ್ಸಾ  ಮತ್ತು ಸೌರಾಷ್ಟ್ರ ಮುಖಾಮುಖಿಯಾದರೆ, ಗ್ರೌಂಡ್ ಎರಡಲ್ಲಿ ಗುಜರಾತ್ ಮತ್ತು ಸರ್ವೀಸಸ್ ತಂಡಗಳು ಕಣಕ್ಕಿಳಿಯಲಿವೆ. ಇನ್ನು ಮೂರನೇ ಗ್ರೌಂಡ್​ನಲ್ಲಿ ಹರ್ಯಾಣ ಮತ್ತು ರೈಲ್ವೇಸ್ ಮುಖಾಮುಖಿಯಾಗಲಿದೆ. ಹೀಗಾಗಿ ದೆಹಲಿ ಮತ್ತು ಆಂಧ್ರ ಪ್ರದೇಶ್ ನಡುವಣ ಪಂದ್ಯವನ್ನು ಆಲೂರಿನಲ್ಲೇ ಗುರುವಾರ ಆಯೋಜಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Share post:

Subscribe

spot_imgspot_img

Popular

More like this
Related

ಬೆಂಗಳೂರು–ಕರಾವಳಿ–ಗೋವಾ ನಡುವೆ ವಂದೇ ಭಾರತ್‌ ರೈಲು ಸೇವೆಗೆ ಹೆಚ್‌.ಡಿ. ಕುಮಾರಸ್ವಾಮಿ ಮನವಿ

ಬೆಂಗಳೂರು–ಕರಾವಳಿ–ಗೋವಾ ನಡುವೆ ವಂದೇ ಭಾರತ್‌ ರೈಲು ಸೇವೆಗೆ ಹೆಚ್‌.ಡಿ. ಕುಮಾರಸ್ವಾಮಿ ಮನವಿ ನವದೆಹಲಿ:...

ಬ್ರೆಡ್ ಒಳಗೆ ಕೊಕೇನ್ ಸಾಗಾಟ: ನೈಜೀರಿಯಾ ಮೂಲದ ಮಹಿಳೆ ಅರೆಸ್ಟ್

ಬ್ರೆಡ್ ಒಳಗೆ ಕೊಕೇನ್ ಸಾಗಾಟ: ನೈಜೀರಿಯಾ ಮೂಲದ ಮಹಿಳೆ ಅರೆಸ್ಟ್ ಬೆಂಗಳೂರು: ತಿನ್ನುವ...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ; ಬೆಂಗಳೂರಿನ AQI ಆತಂಕಕಾರಿ ಮಟ್ಟಕ್ಕೆ ಕುಸಿತ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹದಗೆಡುತ್ತಿರುವ ಗಾಳಿಯ ಗುಣಮಟ್ಟ; ಬೆಂಗಳೂರಿನ AQI ಆತಂಕಕಾರಿ...

ಲಂಕಾ ನೆಲದಲ್ಲಿ ಕ್ರಿಕೇಟ್ ಕ”ಲಾ”ರವ !

ಲಂಕಾ ನೆಲದಲ್ಲಿ ಕ್ರಿಕೇಟ್ ಕ"ಲಾ"ರವ ! "ಲಾಯರ್" ಗಳ ಬಗ್ಗೆ ನಿಮಗೆಲ್ಲ ಗೊತ್ತೆ...