ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

Date:

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರವು “ಟೋಪಿ ಸರ್ಕಾರ”ವಾಗಿದ್ದು, ಇಷ್ಟು ದಿನ ಕನ್ನಡಿಗರಿಗೆ ಟೋಪಿ ಹಾಕಿ ಈಗ ಕರ್ನಾಟಕದಲ್ಲಿ “ಮಿನಿ ಬಾಂಗ್ಲಾದೇಶ” ನಿರ್ಮಿಸುತ್ತಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಯಲಹಂಕದ ಕೋಗಿಲು ಬಡಾವಣೆಯಲ್ಲಿ ಒತ್ತುವರಿ ಹಿನ್ನೆಲೆಯಲ್ಲಿ ಅಕ್ರಮ ವಾಸವಿದ್ದವರನ್ನು ತೆರವುಗೊಳಿಸಿದ ಪ್ರದೇಶಕ್ಕೆ ಭೇಟಿ ನೀಡಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕರ್ನಾಟಕವು ಅನಧಿಕೃತ ವಲಸಿಗರ ತಾಣವಾಗುತ್ತಿದೆ ಎಂದು ಟೀಕಿಸಿದರು.

“ಇವರು ಯಾರು? ಎಲ್ಲಿಂದ ಬಂದವರು? ಒಂದು ವರ್ಷದ ಹಿಂದೆ ಗೂಗಲ್ ಮ್ಯಾಪ್‌ನಲ್ಲಿ ಇಲ್ಲಿ ಮನೆಗಳೇ ಇರಲಿಲ್ಲ. ಈಗ ಮನೆಗಳು ಕಾಣಿಸುತ್ತಿವೆ. ಇವರೆಲ್ಲಾ ಆರು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಬಂದವರಾಗಿದ್ದಾರೆ. ಇವರಿಗೆ ವಿದ್ಯುತ್ ಸಂಪರ್ಕವನ್ನು ಹೇಗೆ ಒದಗಿಸಲಾಗಿದೆ?” ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಸುಮಾರು 4 ಲಕ್ಷ ಜನರು ಅನಧಿಕೃತ ಮನೆ ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕವಿಲ್ಲದೆ ಬದುಕುತ್ತಿದ್ದಾರೆ. ಆದರೆ ಇಲ್ಲಿ ದುಬಾರಿ ಕೇಬಲ್ ಸಂಪರ್ಕದ ಮೂಲಕ ವಿದ್ಯುತ್ ಬಳಸಲಾಗುತ್ತಿದೆ. “ಇವರೆಲ್ಲಾ ಸಿದ್ದರಾಮಯ್ಯನವರ ಸಂಬಂಧಿಕರೇ?” ಎಂದು ವ್ಯಂಗ್ಯವಾಡಿದರು.

ಇವರು ಆಂಧ್ರಪ್ರದೇಶದ ಪೆನುಗೊಂಡದಿಂದ ಬಂದವರು ಎಂದು ಹೇಳಲಾಗುತ್ತಿದೆ. 25–28 ವರ್ಷದವರಾಗಿದ್ದು, 25–26 ವರ್ಷಗಳಿಂದ ಇಲ್ಲೇ ವಾಸವಿದ್ದೇವೆ ಎಂದು ಹೇಳುತ್ತಿರುವುದು ಹೇಗೆ ಸಾಧ್ಯ ಎಂದು ಅಶೋಕ್ ಅನುಮಾನ ವ್ಯಕ್ತಪಡಿಸಿದರು.

ಸುಮಾರು 600 ಕೋಟಿ ರೂ. ಮೌಲ್ಯದ ಈ ಜಮೀನನ್ನು ಸರ್ಕಾರ ಯಾವ ಕಾನೂನಿನಡಿ ನೀಡಲು ಮುಂದಾಗಿದೆ ಎಂದು ಪ್ರಶ್ನಿಸಿದ ಅವರು, ನೆರೆಹಾನಿಯಿಂದ ರಾಜ್ಯದಲ್ಲಿ 13 ಸಾವಿರಕ್ಕೂ ಹೆಚ್ಚು ಮನೆಗಳು ಬಿದ್ದಿದ್ದರೂ ರೈತರಿಗೆ ಇನ್ನೂ ಸೂರು ಸಿಗದೆ ಇರುವುದನ್ನು ಉಲ್ಲೇಖಿಸಿದರು. 2,400ಕ್ಕೂ ಹೆಚ್ಚು ಶಾಲೆಗಳ ಶೀಟ್‌ಗಳು ಹಾರಿ ಹೋಗಿದ್ದು, ಮಕ್ಕಳು ಮರದ ಕೆಳಗೆ ಪಾಠ ಮಾಡುವ ಪರಿಸ್ಥಿತಿ ಇದೆ. ಆದರೆ ಇಲ್ಲಿ ಕೇವಲ ಎರಡು ದಿನಗಳಲ್ಲಿ ಬಹುಮಹಡಿ ಕಟ್ಟಡಗಳಲ್ಲಿ ಜಾಗ ಒದಗಿಸಲಾಗುತ್ತಿದೆ ಎಂದು ಅವರು ಟೀಕಿಸಿದರು.

Share post:

Subscribe

spot_imgspot_img

Popular

More like this
Related

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ

ನಾರಾಯಣಗುರುಗಳ ಕನಸಿನ ಸಹೃದಯ ಭಾರತವನ್ನು ನಾವು ಗಟ್ಟಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ ತಿರುವನಂತಪುರ: ವೈವಿಧ್ಯತೆಯ...

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ ವೈರಲ್

ಕಲಬುರಗಿ ಸೆಂಟ್ರಲ್ ಜೈಲಿನ ಅಕ್ರಮಗಳು ಬಯಲು: ಕೈದಿಗಳ ಹೈಫೈ ಲೈಫ್ ವಿಡಿಯೋ...

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್

ಸಾರಿಗೆ ಇಲಾಖೆ ಎಚ್ಚರಿಕೆಗೂ ಕ್ಯಾರಿಲ್ಲ: ಲಗೇಜ್ ತುಂಬಿಕೊಂಡು ಬಂದ ಬಸ್‌ಗಳು ಸೀಜ್ ದೇವನಹಳ್ಳಿ:...

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ – ವಿಜಯೇಂದ್ರ ಟೀಕೆ

ಕೋಗಿಲು ಅಕ್ರಮ ಮನೆ ತೆರವು ವಿಚಾರ: ಸಿಎಂ–ಡಿಸಿಎಂ ಯೂಟರ್ನ್ ಹೊಡೆದಿದ್ದಾರೆ –...