ಚುನಾವಣೆ ಬಂತು ಅಂದ್ರೆ ಸಾಕು ಪ್ರತಿನಿಧಿಗಳು ಜನರಿಗೆ ಭರವಸೆಯ ಸುರಿಮಳೆಯನ್ನೇ ಸುರಿಸುತ್ತಾರೆ.. ಅದೇ ರೀತಿಯಾಗಿ ಉತ್ತರ ಭಾರತದಲ್ಲಿ ಈ ವಿಧಾನ ಸಭಾ ಚುನಾವಣೆಯಂತೂ ಸಖತ್ ಪೈಪೋಟಿಯಿಂದ ಕೂಡಿದೆ.. ಇನ್ನು ಪಕ್ಷಗಳು ರಾಜ್ಯದ ರಾಜ್ಯಭಾರ ಮಾಡುವ ನಿಟ್ಟಿನಲ್ಲಿ ಹಲವು ಭರವಸೆಗಳನ್ನು ನೀಡೋದು ಸಹಜ. ಆದ್ರೆ ಈ ಬಾರಿಯ ಭರವಸೆಗಳು ಸ್ವಲ್ಪ ವಿಭಿನ್ನವಾಗಿದೆ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ಘೋಷಿಸಿರುವಂತೆಯೇ ಪಂಜಾಬ್ ಪ್ರಾಂತ್ಯದಲ್ಲಿ ಸ್ಮಾರ್ಟ್‍ಫೋನ್ ಕೊಡುಗೆ ನೀಡಲು ಕಾಂಗ್ರೆಸ್ ಪಕ್ಷ ಮುಂದೆ ಬಂದಿದೆ..! ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ 50 ಲಕ್ಷ ಯುವಕರಿಗೆ ಸ್ಮಾರ್ಟ್ ಫೋನ್ ಉಡುಗೊರೆಯಾಗಿ ನೀಡಲಾಗುವುದು. ಅಲ್ಲದೇ 1 ವರ್ಷ ಡೇಟಾ ಉಚಿತವಾಗಿ ನೀಡಿಲಾಗುದು ಎಂದು ಪಂಜಾಬ್ ರಾಜ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮರಿಂದರ್ ಸಿಂಗ್ ಘೊಷಿಸಿದ್ದಾರೆ.
ಇನ್ನು ಕ್ಯಾಪ್ಟನ್ ಸ್ಮಾರ್ಟ್ ಕನೆಕ್ಟ್ ನಲ್ಲಿ ಯುವಕರು ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಿರುವ ಅಮರಿಂದರ್ ಸಿಂಗ್ ಹೆಸರು ನೊಂದಾಯಿಸಿಕೊಳ್ಳಲು ನವೆಂಬರ್ 30ರವರೆಗೆ ಕಾಲಾವಕಾಶ ನೀಡಿದ್ದಾರೆ. ಅಲ್ಲದೇ ಈಗಾಗಲೇ ಅಪಾರ ಸಂಖ್ಯೆಯ ಯುವಕರು ಸ್ಮಾರ್ಟ್ ಕನೆಕ್ಟ್ ಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಡಿಜಿಟಲ್ ಇಂಡಿಯಾ ಕಡೆಗೆ ಯುವಕರನ್ನು ಸೆಳೆಯುವ ಉದ್ದೇಶದಿಂದ ಉಚಿತ ಸ್ಮಾರ್ಟ್‍ಫೋನ್ ನೀಡಿಲಾಗುವುದು ಎಂದು ಅವರು ತಿಳಿಸಿದ್ದಾರೆ.
Like us on Facebook The New India Times
POPULAR STORIES :
ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!
ಕ್ಯೂನಲ್ಲಿ ನಿಂತಿದ್ದ ಜನರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸ್..!