ಪಾನಿಪೂರಿ 1.ರೂ, ಸಮೋಸ 3.ರೂ, ಮೈಸೂರು ಸ್ವೀಟ್ ಅಂಗಡಿಯ ಬಂಪರ್ ಆಫರ್..!

Date:

ಬನ್ನಿ ಬನ್ನಿ.. ಬಂಪರ್ ಆಫರ್ ಇದೆ ಬನ್ನಿ.. ಪಾನಿಪುರಿ 1 ರೂಪಾಯಿ.. ಸಮೋಸ 3ರೂ, ಜಿಲೇಬಿ 4ರೂ ಬನ್ನಿ.. ಹೀಗೆ ಜನರನ್ನ ತನ್ನತ್ತ ಆಕರ್ಷಿಸಿದ್ದು ಮೈಸೂರಿನ ಶ್ರೀ ವೈಷ್ಣವಿ ಸ್ವೀಟ್ಸ್..! ಅರೆ ಹೊಸದಾಗಿ ಓಪನ್ ಮಾಡಿರೋದ..? ಅದಿಕ್ಕೆ ಈ ಆಫರ್ ಕೊಡ್ತಾ ಇರ್ಬೋದೇನೋ ಅನ್ಕೊಂಡ್ರೆ ಖಂಡಿತ ಇಲ್ಲ.. ಇವಕ್ಕೆಲ್ಲಾ ಮೂಲ ಕಾರಣ ನೋಟ್ ಬ್ಯಾನ್..!
ಹೌದು.. ಕೇಂದ್ರ ಸರ್ಕಾರ ನೋಟ್ ಬ್ಯಾನ್ ಕ್ರಮದಿಂದ ಚಿಲ್ಲರೆ ಇಲ್ಲದೆ ವ್ಯಾಪಾರಕ್ಕೂ ಸಣ್ಣ ಪ್ರಮಾಣದ ಪೆಟ್ಟು ಬಿದ್ದಿರೋದು ಗೊತ್ತಿರುವ ಸಂಗತಿ. ಗ್ರಾಹಕರ ಬಳಿ ಚಿಲ್ಲರೆ ಇಲ್ಲದೆ ಅದೆಷ್ಟೋ ಜನ ಹೊಟೇಲ್ ಹಾಗೂ ಇತರೆ ತಿನಿಸು ಅಂಗಡಿಗಳತ್ತ ಮುಖ ಕೂಡ ಮಾಡ್ತಾ ಇಲ್ಲ. ಜನರ ಸಮಸ್ಯೆಯನ್ನು ಅರಿತ ಮೈಸೂರಿನ ಕುವೆಂಪು ನಗರದಲ್ಲಿರುವ ವೈಷ್ಣವಿ ಚಾಟ್ ತಮ್ಮ ಗ್ರಾಹಕರಿಗೆ ಇನ್ನು ಮೂರು ದಿನಗಳ ಕಾಲ ಬಂಪರ್ ಆಫರ್ ನೀಡಿದೆ ನೋಡಿ..!
ಈಗಾಗಲೇ ಈ ಆಫರ್ ಆರಂಭವಾಗಿದ್ದು ಇಂದಿಗೆ ಕೊನೆಗೊಳ್ಳಲಿದೆ. ಸಂಜೆ 6ರಿಂದ ರಾತ್ರಿ 9ರವರೆಗೆ ಕೇವಲ 1ರೂಗೆ ಮಸಾಲೆ ಪೂರಿ, 3ರೂ.ಗೆ ಸಮೋಸ, 4ರೂಪಾಯಿಗೆ ಜಿಲೇಬಿ ಹಾಗೂ 5ರೂ.ಗೆ ಪಾವ್ ಬಜ್ಜಿ ನೀಡುವುದಾಗಿ ಮಾಲಿಕ ನವೀನ್ ತಿಳಿಸಿದ್ದಾರೆ.
ಇನ್ನು ಈ ಆಫರ್ ಪಡೆದುಕೊಳ್ಳಲು ನೆನ್ನೆಯಿಂದ ಅಂಗಡಿ ಮುಂದೆ ಭಾರಿ ಪ್ರಮಾಣದ ಜನ ಸಾಗರ ಹರಿದು ಬಂದಿದೆ. ಸುಮಾರು ಒಂದು ಕಿ.ಮಿವರೆಗೂ ಕ್ಯೂನಲ್ಲಿ ನಿಂತು ಜನರು ಚಾಟ್ಸ್ ಸವಿದಿದ್ದಾರೆ. ಅಬ್ಬಬ್ಬಾ ಅಂದ್ರೂ 1 ಸಾವಿರ ಜನ ಬರಬಹುದು ಎಂದು ಅಂದಾಜಿಸಿದ್ದ ಅಂಗಡಿಯವರಿಗೆ ಕೇವಲ ಎರಡೇ ದಿನದಲ್ಲಿ 7 ಸಾವಿರಕ್ಕೂ ಅಧಿಕ ಜನ ಬಂದು ಶಾಕ್ ನೀಡಿದ್ದಾರೆ. ಚಾಟ್ಸ್ ನೀಡುವ ವೇಳೆ ಸ್ವಲ್ಪ ವಿಳಂಬವಾದ್ರೂ ಕಾದು ತಿಂದು ಹೋಗ್ತಾ ಇದಾರಂತೆ ಜನ..!

Like us on Facebook  The New India Times

POPULAR  STORIES :

ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.

ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ

ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!

ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!

50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ

ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...