ನೋಟ್ ಬ್ಯಾನ್ ಬಿಸಿ ಯಾರಿಗೆ ತಟ್ಟಿಲ್ಲ ಹೇಳಿ.. ಸಾಮಾನ್ಯ ನಾಗರೀಕರಿಂದ ಹಿಡಿದು ವ್ಯಾಪಾರಸ್ಥರವರೆಗೂ ನೋಟ್ ಬ್ಯಾನ್‍ನಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇನ್ನು ಮದುವೆ-ಮುಂಜಿ ಇಟ್ಕೊಂಡೊರ ಗತಿ ಆ ದೇವರೇ ಬಲ್ಲ..! ಆದ್ರೆ ಇಲ್ಲೊಂದು ಜೋಡಿ ಎಷ್ಟು ಸಿಂಪಲ್ಲಾಗಿ ಮದ್ವೆ ಮಾಡ್ಕೊಂಡಿದ್ದಾರೆ ಅಂದ್ರೆ ಅವರ ವದುವೆಗೆ ತಗುಲಿದ ವೆಚ್ಚ ಕೇಳುದ್ರೆ ನಿಜಕ್ಕೂ ಶಾಕ್ ಆಗಿ ಹೋಗ್ತೀರ..! ಈ ಜೋಡಿಯ ಮದುವೆ ತಗುಲಿದ ಖರ್ಚು ಕೇವಲ 500 ರೂಪಾಯಿ..!
ಹೌದು.. ಸೂರತ್‍ನಲ್ಲಿ ನವೆಂಬರ್ 24 ರಂದು ಇಬ್ಬರು ಜೋಡಿಯ ಮದುವೆ ಗ್ರ್ಯಾಂಡಾಗಿ ಮಾಡ್ಬೇಕು ಅಂತ ಎರಡು ಕುಟುಂಬಗಳು ನಿರ್ಧರಿಸಿದ್ದರು.. ಅದೇ ರೀತಿಯಾಗಿ ಸೂರತ್‍ನಲ್ಲೆ ದೊಡ್ಡ ಛತ್ರವನ್ನು ಸಹ ಬುಕ್ ಮಾಡಿದ್ರು. ಇನ್ನೇನು ಮದ್ವೆಗೆ ವಾರಗಳು ಮಾತ್ರ ಬಾಕಿ ಉಳಿದಿವೆ ಅಂದಾಗ ಮೋದಿ ಅವರ ನೋಟ್ ಬ್ಯಾನ್ ಬಾಂಬ್‍ನಿಂದ ದಿಕ್ಕರಿಸಿ ಹೋಗಿದ್ದಾರೆ. 500 ಮತ್ತು 1000 ಮುಖಬೆಲೆಯ ನೋಟು ನಿಷೇಧವಾದ ಪರಿಣಾಮವಾಗಿ ಮದುವೆಯನ್ನೇ ಮುಂದೆ ಹಾಕಲು ಪ್ಲಾನ್ ಮಾಡಿದ್ರು. ಆದ್ರೆ ಕುಟುಂಬದ ಇನ್ನು ಕೆಲವು ಮುಖ್ಯ ವ್ಯಕ್ತಿಗಳು ಸೇರಿ ಸಿಂಪಲ್ಲಾಗ್ ಒಂದ್ ಮದ್ವೆ ಮಾಡಲು ನಿರ್ಧರಿಸಿದ್ರು..! ಎಲ್ಲರೂ ಒಪ್ಪಿಗೆಯ ಮೇರೆಗೆ ಈ ಜೋಡಿಯ ಮದ್ವೆನೂ ಮಾಡ್ಸಿದ್ರು.. ಅದಕ್ಕೆ ತಗುಲಿದ ಒಟ್ಟು ವೆಚ್ಚ ಕೇವಲ 500 ರೂ..! ಇನ್ನು ಮದ್ವೆಗೆ ಬಂದ ಅಥಿಗಳಿಗೆ ನೀರು ಹಾಗೂ ಟೀ ಭಕ್ಷ ಬೋಜನವಾಗಿತ್ತು ನೋಡಿ..!
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಧು ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರದಿಂದ ನಿಜಕ್ಕೂ ನಮ್ಮ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಮದ್ವೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ ಎನ್ನುವಾಗ್ಲೆ ಇಂತಹ ಸುದ್ದಿ ಕೇಳಿ ದಂಗಾಗಿ ಹೋದ್ವಿ. ಆದ್ರೆ ಬೇರೆ ದಾರಿ ಕಾಣದೇ ಸರಳ ಮದುವೆಯಾಗಬೇಕಾಯಿತು ಎಂದಿದ್ದಾರೆ.
Like us on Facebook The New India Times
POPULAR STORIES :
500ರೂ. ಹೊಸ ನೋಟಿನಲ್ಲಿ ತಪ್ಪು: ಆರ್‍ಬಿಐ ಸ್ಪಷ್ಟನೆ
ಮಲ್ಯರಂತೆ ನನ್ನ ಸಾಲ ಮನ್ನಾ ಮಾಡಿ: ಮಂಡ್ಯ ರೈತನ ಮನವಿ.
ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ 100 ಮಹಿಳೆಯರ ಪಟ್ಟಿಯಲ್ಲಿ ಸಾಲುಮರದ ತಿಮ್ಮಕ್ಕ
ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!
ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!
50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ
ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!