ಪ್ರಸ್ತುತದ ವರ್ಷದಲ್ಲಿ ನಿರೀಕ್ಷೆಗಿಂತಲೂ ತೀವ್ರತೆಯ ಚಳಿಗಾಲ ಇರಲಿದೆ, ಆದರೆ ಉತ್ತರ ಭಾರತದಲ್ಲಿ ಈ ಬಾರಿ ಚಳಿ ಗಾಳಿ ಕಡಿಮೆ ಬೀಸಲಿದ್ದು, ಈ ಭಾಗಗಳಲ್ಲಿ ಕಡಿಮೆ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದೇಶದ ಶೀತಲ ವಲಯಗಳಲ್ಲಿ ಈ ಬಾರಿ ಸಾಮಾನ್ಯ ತಾಪಮಾನಕ್ಕಿಂತ 83 ಪ್ರತಿಶಕ ಕಡಿಮೆ ತಾಪಮಾನ ದಾಖಲಾಗಲಿದೆ ಎಂದು ಇಲಾಖೆ ಹೇಳಿದೆ. ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಅತಿ ಕಡಿಮೆ ಇರಲಿದ್ದು 1901ರ ನಂತರ 2016ರಲ್ಲಿಯೇ ಅತೀ ಹೆಚ್ಚು ತಾಪಮಾನ ದಾಖಲಾಗಲಿದೆ ಎಂದು ತಿಳಿಸಿದ್ದಾರೆ. ವಾಯುವ್ಯ ಹಾಗೂ ಈಶಾನ್ಯ ಭಾರತದಲ್ಲಿ ಸರಾಸರಿ ತಾಪಮಾನ 0.5 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಿದ್ದು, ಜಮ್ಮು ಕಾಶ್ಮೀರ, ರಾಜಸ್ಥಾನ, ದಿಲ್ಲಿಯಲ್ಲಿ 1 ಡಿಗ್ರಿ ಏರಿಕೆ ಕಂಡಿದೆ. ಚಳಿಗಾಲ ಪ್ರಾರಂಭವಾದಾಗಿನಿಂದ ಮೊದಲಬಾರಿಗೆ ಮುನ್ಸೂಚನೆ ನೀಡಿರುವ ಇಲಾಖೆ, ಮುಂದೆ 15 ದಿನಗಳಿಗೊಮ್ಮೆ ಸೂಚನೆ ನೀಡುವುದಾಗಿ ತಿಳಿಸಿದೆ.
Like us on Facebook The New India Times
POPULAR STORIES :
ಜಿಯೋ ಸಿಮ್ ಗ್ರಾಹಕರಿಗೆ ಬಂಪರ್ ಆಫರ್.!