ದಾಖಲೆಗಳೆ ಇಲ್ಲದ ಬರೋಬ್ಬರಿ 13 ಸಾವಿರ ಕೋಟಿ ಕಪ್ಪು ಹಣ ಘೋಷಿಸಿಕೊಂಡಿದ್ದ ಅಹಮದಾಬಾದ್ ಉದ್ಯಮಿ ಮಹೇಶ್ ಶಾ ಎಂಬುವವರಿಗೆ ಅದರ ಅತ್ಯಲ್ಪ ಪ್ರಮಾಣದ ತೆರಿಗೆ ಕಟ್ಟಲು ವಿಫಲನಾಗಿದ್ದಾನೆ..! ಕೇಂದ್ರ ಸರ್ಕಾರದ ಆದಾಯ ಘೋಷಣೆ ಯೋಜನೆಯಡಿಯಲ್ಲಿ ಕಪ್ಪು ಹಣ ಘೋಷಿಸಿಕೊಳ್ಳಲು ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿತ್ತು. ಈ ಹಿನ್ನಲೆಯಲ್ಲಿ ಮಹೇಶ್ 13 ಸಾವಿರ ಕೋಟಿ ಕಪ್ಪುಹಣ ಘೋಷಿಸಿಕೊಂಡಿದ್ದರು. ಇನ್ನು ಈ ಐಡಿಎಸ್ ನಿಯಮದ ಪ್ರಕಾರ ಕಪ್ಪು ಹಣ ಘೋಷಿಸಿಕೊಂಡವರಿಗೆ ಆದಾಯ ತೆರಿಗೆ ಇಲಾಖೆಯ ಕಾನೂನು ಕ್ರಮಗಳಿಂದ ರಕ್ಷಣೆ ಸಿಗುತ್ತದೆ. ಅದರಂತೆ ತನ್ನ ಕಪ್ಪು ಹಣ ಘೋಷಣೆ ಮಾಡಿಕೊಂಡಿದ್ದ ಮಹೇಶ್ ತನ್ನ ಮೊದಲ ಕಂತಿನ ಕೇವಲ 975 ಕೋಟಿ ರುಪಾಯಿ ತೆರಿಗೆ ಕಟ್ಟಲು ವಿಫಲನಾಗಿದ್ದಾನೆ..!
ಈತ ಇಷ್ಟೊಂದು ಅಲ್ಪ ಪ್ರಮಾಣದ ತೆರಿಗೆ ಕಟ್ಟುವಲ್ಲಿ ಯಾಕೆ ವಿಫಲ ಹೊಂದಿದ್ದಾನೆ ಎಂದು ತಿಳಿದು ಕೊಂಡಾಗ ಉದ್ಯಮಿ ಶಾ ಅಹಮದಾಬಾದ್‍ನ ಹಲವು ದೊಡ್ಡ ಕಾಳಧನಿಕರ ಪರವಾಗಿ 13 ಸಾವಿರ ಕೋಟಿ ಕಪ್ಪು ಹಣ ಘೋಷಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.
Like us on Facebook The New India Times
POPULAR STORIES :
ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..?
ರಸ್ತೆ ಮೇಲೆ 2 ಸಾವಿರದ ಹೊಸ ನೋಟು ಬಿದ್ದಿದ್ರೆ ನೀವೇನ್ ಮಾಡ್ತಿರಾ..?
ಜಿಯೋ ಸಿಮ್ ಗ್ರಾಹಕರಿಗೆ ಬಂಪರ್ ಆಫರ್.!