ಪ್ರತಿ ವರ್ಷ ಟೈಮ್ಸ್ ಮ್ಯಾಗಜಿನ್ ಹೊರಡಿಸುವ ‘ವರ್ಷದ ವ್ಯಕ್ತಿ’ ಓದುಗರ ಆನ್‍ಲೈನ್ ಮತದಾನದಲ್ಲಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿಯವರು ಗೆಲುವು ಸಾಧಿಸಿದ್ದಾರೆ. ಓದುಗರ ಮತದಾನದಲ್ಲಿ ಪ್ರಧಾನಿ ಮೋದಿ ಅಮೇರಿಕಾದ ನಿಯೋಜಿತ ಪ್ರಧಾನಿ ಡೊನಾಲ್ಡ್ ಟ್ರಂಪ್‍ರನ್ನೂ ಹಿಂದಿಕ್ಕಿ ಗೆಲುವು ಸಾಧಿಸಿದ್ದಾರೆ. ಇವರ ಜೊತೆಯಲ್ಲಿ ಅಮೇರಿಕಾ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ, ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್, ಹಿಲರಿ ಕ್ಲಿಂಟನ್, ಎಫ್‍ಬಿಐ ಮುಖ್ಯಸ್ಥ ಜೇಮ್ಸ್ ಕಾಮಿ, ಆಪಲ್ ಸಿಇಒ ಟಿಮ್ ಕುಕ್ ಇನ್ನು ಮುಂತಾದವರನ್ನು ಮೋದಿ ಹಿಂದಿಕ್ಕಿದ್ದಾರೆ. ಟೈಮ್ಸ್ ‘ವರ್ಷದ ವ್ಯಕ್ತಿ’ ಗೌರವದ ಆಯ್ಕೆಗೆ ನಡೆಯುವ ಮತದಾನದಲ್ಲಿ ಪ್ರಧಾನಿ ಮೋದಿ ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧೆಯಲ್ಲಿದ್ದಾರೆ. ಒಳ್ಳೆಯ ಅಥವಾ ಕೆಟ್ಟ ವಿಷಯಕ್ಕಾಗಿ ಕಳೆದ ವರ್ಷದಲ್ಲಿ ನಮ್ಮ ಜಗತ್ತಿನ ಮೇಲೆ ಪ್ರಭಾವ ಬೀರಿರುವ ವ್ಯಕ್ತಿಗಳನ್ನು ವರ್ಷದ ವ್ಯಕ್ತಿ ಎಂದು ಓದುಗರ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಕಳೆದ ಬಾರಿ ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್ ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿದ್ದರು.
Like us on Facebook The New India Times
POPULAR STORIES :
ಸಿಎಂ ಜಯಲಲಿತಾ ಹೃದಯಾಘಾತಕ್ಕೆ ಕಾರಣವೇನು..?
ಎಚ್ಚರ ಗ್ರಾಹಕರೇ..! ಜಸ್ಟ್ 6 ಸೆಂಕೆಂಡ್‍ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗುತ್ತೆ..!!
ಬಿಗ್‍ಬಾಸ್‍ನ ಹೊಸ ಕಂಟೆಸ್ಟೆಂಟ್ ಮಸ್ತಾನ್ ಭಾಯ್ ಯಾರು ಗೊತ್ತಾ..?
ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..?