ದಕ್ಷಿಣ ಭಾರತದ ಮೊದಲ ನಗದು ರಹಿತ ಗ್ರಾಮ ಯಾವುದು ಗೊತ್ತಾ..?

Date:

ನೋಟು ನಿಷೇಧದ ಬಳಿಕ ದೇಶದಾದ್ಯಂತ ಆರ್ಥಿಕ ಬಿಕ್ಕಟ್ಟು ತಲೆದೋರಿರೋದು ಎಲ್ಲರಿಗೂ ಗೊತ್ತಿದೆ. ಅದ್ರಲ್ಲೂ ಈ ತಿಂಗಳಂತೂ ತಿಂಗಳ ವೇತನ ಪಡೆಯಲು ನೌಕರರು ಪರದಾಡುತ್ತಿರುವ ಸ್ಥಿತಿಯಂತೂ ಹೇಳತೀರದು. ಹಾಗಾಗಿ ನಗದು ರಹಿತ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಕೂಗು ಈಗ ಎಲ್ಲೆಡೆ ಕೇಳಿ ಬರುತ್ತಿದೆ. ಸರ್ಕಾರದ ಉದ್ದೇಶವೂ ಕೂಡ ಅದೇ ಅಲ್ವೇ..! ಆದ್ರೆ ದಕ್ಷಿಣ ಭಾರತದ ಒಂದು ಪುಟ್ಟ ಗ್ರಾಮದಲ್ಲಿ ಹಣದ ವಹಿವಾಟುಗಳೇ ತುಂಬಾ ವಿರಳ. ಅಷ್ಟೇ ಅಲ್ಲ ಸರ್ಕಾರ ಕೈಗೊಂಡಿರುವ ಕ್ಯಾಶ್‍ಲೆಸ್ ಎಕನಾಮಿಕಲ್ ನಿರ್ಮಾಣಕ್ಕೆ ಈ ಗ್ರಾಮ ಸೂಕ್ತ ಮಾದರಿ ಅಂದ್ರೂನು ತಪ್ಪಾಗೊಲ್ಲ. ಅರೆ ದಕ್ಷಿಣ ಭಾರತದ ಒಂದು ಪುಟ್ಟ ಗ್ರಾಮದಲ್ಲೂ ಕ್ಯಾಶ್‍ಲೆಸ್ ವಹಿವಾಟು ನಡೀತಾ ಇದ್ಯಾ..? ಎಲ್ಲಿ ಅಂತ ಕೇಳೋದಾದ್ರೆ.. ಅದು ಬೇರೆಲ್ಲೂ ಅಲ್ಲ ತೆಲಂಗಾಣದಲ್ಲಿ..! ಹೌದು.. ಭಾರತದ ಹೊಚ್ಚ ಹೊಸ ರಾಜ್ಯವಾದ ತೆಲಂಗಾಣದ ಸಿದ್ದಿಪೇಟ್ ವಿಧಾನಸಭಾ ಕ್ಷೇತ್ರದಲ್ಲಿರುವ ಇಬ್ರಾಹಿಂಪುರದಲ್ಲಿ ಇಂದಿಗೂ ಕ್ಯಾಶ್‍ಲೆಸ್ ವ್ಯವಹಾರ ನಡೀತಾ ಇದೆ. ಅಲ್ಲದೇ ದಕ್ಷಿಣ ಭಾರತದ ಮೊಟ್ಟ ಮೊದಲ ಕ್ಯಾಶ್‍ಲೆಸ್ ವ್ಯಾವಹಾರಿಕ ಗ್ರಾಮ ಎಂಬ ಖ್ಯಾತಿಗೂ ಪಾತ್ರವಾಗಿದೆ. ಈ ಇಬ್ರಾಹಿಂ ಪುರವನ್ನ ನೀರಾವರಿ ಸಚಿವರದ ಟಿ. ಹರೀಶ್ ದತ್ತು ಪಡೆದಿದ್ದು, ಈ ಗ್ರಾಮದಲ್ಲಿ ಸುಮಾರು 1200 ಜನರು ವಾಸ ಮಾಡ್ತಾ ಇದಾರೆ. ಇಲ್ಲಿನ ಪ್ರತಿಯೊಬ್ಬರೂ ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ. ಅಷ್ಟೆ ಅಲ್ಲಾ ಎಲ್ಲಾ ಭಾಗಗಳಲ್ಲೂ ಸ್ವೈಪಿಂಗ್ ಮೆಷಿನ್ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಸಚಿವ ಟಿ.ಹರೀಶ್ ಸಿದ್ದಿಪೇಟ್ ಕ್ಷೇತ್ರದ ಜನಪ್ರತಿನಿಧಿಯಾಗಿದ್ದು ಇಬ್ರಾಹಿಂಪುರವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತಿಸಿರೋದಾಗಿ ಹೇಳಿಕೊಂಡಿದ್ದಾರೆ. ಮಾತ್ರವಲ್ಲದೇ ತೆಂಲ್ಲಂಗಾಣ ಸರ್ಕಾರ ಈ ಗ್ರಾಮಕ್ಕೆ ಮೊದಲ ಕ್ಯಾಶ್‍ಲೆಸ್ ಗ್ರಾಮ ಅನ್ನೋ ಸರ್ಟಿಫಿಕೇಟ್ ಕೂಡ ನೀಡಿದೆ.

https://www.youtube.com/watch?v=HWQOtOq2a7k

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಸಂಜನಾ ಐ ಲವ್ ಯೂ ಎಂದ ಪ್ರಥಮ್..! ಆಕೆ ಕೊಟ್ಟ ಉತ್ತರ ಏನು..?

ಸಿಎಂ ಜಯಲಲಿತಾ ಹೃದಯಾಘಾತಕ್ಕೆ ಕಾರಣವೇನು..?

ಎಚ್ಚರ ಗ್ರಾಹಕರೇ..! ಜಸ್ಟ್ 6 ಸೆಂಕೆಂಡ್‍ನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹ್ಯಾಕ್ ಆಗುತ್ತೆ..!!

ಬಿಗ್‍ಬಾಸ್‍ನ ಹೊಸ ಕಂಟೆಸ್ಟೆಂಟ್ ಮಸ್ತಾನ್ ಭಾಯ್ ಯಾರು ಗೊತ್ತಾ..?

ವೆಬ್ ಹುಡುಕಾಟದಲ್ಲಿ ಜನರು ಯಾರ ಹೆಸರನ್ನು ಅತೀ ಹೆಚ್ಚಾಗಿ ಬಳಸಿದ್ದಾರೆ ಗೊತ್ತಾ..?

ರಸ್ತೆ ಮೇಲೆ 2 ಸಾವಿರದ ಹೊಸ ನೋಟು ಬಿದ್ದಿದ್ರೆ ನೀವೇನ್ ಮಾಡ್ತಿರಾ..?

Share post:

Subscribe

spot_imgspot_img

Popular

More like this
Related

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ

ಸ್ಯಾಂಡಲ್ ವುಡ್ ಖ್ಯಾತ ಖಳನಟ ‘ಹರೀಶ್ ರಾಯ್’ ನಿಧನ ಸ್ಯಾಂಡಲ್‌ವುಡ್‌ನ ಖ್ಯಾತ ನಟ...

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಜಾ

ಸರ್ಕಾರಿ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಅನುಮತಿ ಕಡ್ಡಾಯ ವಿಚಾರ : ರಾಜ್ಯ ಸರ್ಕಾರದ...

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ? ಇಲ್ಲಿ ತಿಳಿಯಿರಿ

ಮಹಿಳೆಯರೇ ಈ ವಿಷ್ಯ ತಿಳಿದುಕೊಳ್ಳಿ! ಚಳಿಗಾಲದಲ್ಲಿ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯಬೇಕಾ?...

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ. ಸುರೇಶ್ ವಾಗ್ದಾಳಿ

ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಯಾಗಬಾರದು ಎಂದು ಬಿಜೆಪಿ ಕುತಂತ್ರ, ಅಸೂಯೆ: ಡಿ.ಕೆ....