ಮಹಿಳೆಯೊಬ್ಬರು 20 ಸಾವಿರ ರೂಪಾಯಿಗೆ ತಾನು ಹೆತ್ತ ಮಗುವನ್ನೇ ಮಾರಿರೋ ಘಟನೆ ಬೇಲೂರಿನಲ್ಲಿ ನಡೆದಿದೆ…!
ನಿವೃತ್ತ ನರ್ಸ್ ಶಾಂತಮ್ಮ ಎಂಬುವವರ ಸಹಾಯದಿಂದ ಮಹಿಳೆ ತನ್ನ ಮೂರು ತಿಂಗಳ ಗಂಡು ಮಗುವನ್ನು ಮಂಜುಳಾ ಎಂಬುವವರಿಗೆ ಮಗುವನ್ನು ಮಾರಾಟ ಮಾಡಿದ್ದರು. ಮಗುವನ್ನು ಕೊಂಡುಕೊಂಡ ಮಂಜುಳಾ ಎಎಸ್‍ಐ ಒಬ್ಬರ ಪತ್ನಿ ಎಂದು ಹೇಳಲಾಗ್ತಿದೆ.
ಮಹಿಳಾ ಮತ್ತು ಮಕ್ಕಳ ಇಲಾಖೆ ನಿಯಮದಂತೆ ಮಗುವನ್ನು ದತ್ತು ಪಡೆಯಬೇಕು. ಆದರೆ, ಯಾವುದೇ ನಿಯಮಗಳನ್ನು ಪಾಲಿಸದೇ ಮಗುವನ್ನು ಒಬ್ಬರಿಂದ ಇನ್ನೊಬ್ಬರು ಕೊಡುಕೊಳ್ಳುವಿಕೆ ವ್ಯಾಪಾರ ಮಾಡಿಕೊಂಡಿರೋದು ಅಪರಾಧವಾಗಿದೆ. ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ರಕ್ಷಿಸಿದ್ದಾರೆ. ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.